Job Description: * "ಕನ್ನಡಪ್ರಭ ದಿನಪತ್ರಿಕೆಯ ಮಾಜಿ ಸಂಪಾದಕರಾಗಿದ್ದ 87 ವರ್ಷದ ಕೆ.ಸತ್ಯನಾರಾಯಣ ರವರು ವಯೋಸಹಜ ಅನಾರೋಗ್ಯದಿಂದ ಜನೆವರಿ 08 ರಂದು ನಿಧನರಾದರು.* ಪತ್ರಿಕಾ ವಲಯದಲ್ಲಿ "ಸತ್ಯ" ಎಂದೇ ಹೆಸರುವಾಸಿಯಾಗಿದ್ದ ಅವರು "ತಾಯಿನಾಡು" ಪತ್ರಿಕೆ ಮೂಲಕ ಪತ್ರಿಕೋದ್ಯಮ ಪ್ರವೇಶಿಸಿದ ಅವರು "ಕನ್ನಡಪ್ರಭ" ಪತ್ರಿಕೆಯಲ್ಲಿ 3 ದಶಕ ಕಾರ್ಯನಿರ್ವಹಿಸಿದ್ದರು. * ಸತ್ಯನಾರಾಯಣ ಅವರು ತಮ್ಮ ಅಂಕಣಗಳ ಮೂಲಕ ರಾಜ್ಯ ಮತ್ತು ದೇಶದ ಸಮಕಾಲೀನ ರಾಜಕೀಯ, ವಾಣಿಜ್ಯ ವಿಷಯಗಳ ಮೇಲೆ ಬೆಳಕು ಚೆಲ್ಲುತ್ತಿದ್ದರು. ಪತ್ರಿಕೋದ್ಯಮಕ್ಕೆ ನೀಡಿದ ಇವರ ಕೊಡುಗೆಗಾಗಿ ಪ್ರತಿಷ್ಠಿತ "ಟಿಎಸ್ಟಾರ್ ಪ್ರಶಸ್ತಿ" ಸೇರಿದಂತೆ ಹಲವಾರು ಪ್ರಶಸ್ತಿಗಳು ಇವರಿಗೆ ಲಭಿಸಿವೆ.