Job Description: * ಜಾಗತಿಕವಾಗಿ ಕೋವಿಡ್ ಉಲ್ಬಣಿಸುತ್ತಿರುವ ಬೆನ್ನಲ್ಲೇ 'ಮೆದುಳು ತಿನ್ನುವ ಅಮೀಬಾ' ಎನ್ನಲಾಗುವ ನೇಗೇರಿಯಾ ಫೌಲೇರಿ ಸೋಂಕಿನಿಂದಾಗಿ ದಕ್ಷಿಣ ಕೊರಿಯಾ ದಲ್ಲಿ ಮೊಟ್ಟಮೊದಲ ಸಾವು ಸಂಭವಿಸಿದೆ.* ಈ ರೋಗ ಮೊಟ್ಟಮೊದಲು 1937ರಲ್ಲಿ ಅಮೆರಿಕದಲ್ಲಿ ಪತ್ತೆಯಾಗಿತ್ತು. ನೇಗೇರಿಯಾ ಫೌಲೇರಿ ಒಂದು ಅಮೀಬಾವಾಗಿದ್ದು, ಶ್ವಾಸ ತೆಗೆದುಕೊಂಡಾಗ ಮೂಗಿನ ಮೂಲಕ ದೇಹ ಪ್ರವೇಶಿಸಿ ಮೆದುಳಿನ ಜೀವಕೋಶಗಳನ್ನು ನಾಶಪಡಿಸುತ್ತದೆ. ಭಾರತ ಅಮೆರಿಕ ಸೇರಿದಂತೆ 2018ರ ವರೆಗೆ 381 ಒಟ್ಟು ನೇಗೇರಿಯಾ ಫೌಲೇರಿ ಕೇಸುಗಳು ವರದಿಯಾಗಿವೆ.* ಕೊರಿಯಾದ ರೋಗ ನಿಯಂತ್ರಣ ಹಾಗೂ ತಡೆ ಏಜೆನ್ಸಿಯು ಥಾಯ್ಲೆಂಡ್ ಪ್ರವಾಸ ಮುಗಿಸಿ ಬಂದ ಕೊರಿಯಾದ ವ್ಯಕ್ತಿಗೆ ನೇಗೇರಿಯಾ ಫೌಲೇರಿ ಸೋಂಕು ತಗುಲಿತ್ತು. ಇದು ಅತ್ಯಂತ ಅಪಾಯಕಾರಿ ಸೋಂಕಾಗಿದ್ದು, ವ್ಯಕ್ತಿಯ ಮೆದುಳು ಇದರಿದಾಗಿ ನಾಶವಾಗುತ್ತದೆ. ಕೊರಿಯಾಕ್ಕೆ ಬಂದ ಮಾರನೇ ದಿನವೇ ವ್ಯಕ್ತಿ ಯನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ಸಹ ಆತ ಮೃತಪ ಟ್ಟಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.