Job Description: * ಸಮರ ನೌಕೆಗಳಿಂದ ಎದುರಾಗುವ ಗುರಿಗಳನ್ನು ಭೇದಿಸುವ ವಿಸ್ತರಿತ ವ್ಯಾಪ್ತಿ ಆವೃತ್ತಿಯ ಬ್ರಹ್ಮೋಸ್ ವಾಯು ಕ್ಷಿಪಣಿಯನ್ನು ಯುದ್ಧ ವಿಮಾನ ಸುಖೋಯ್ - 30 ಎಂಕೆ ಮೂಲಕ ಬ್ರಹ್ಮೋಸ್ ಕ್ಷಿಪಣಿಯ ಪ್ರಯೋಗಕ ಪರೀಕ್ಷೆಯು ಡಿಸೇಂಬರ್ 29 ರಂದು ಯಶಸ್ವಿಯಾಗಿ ಪೂರ್ಣಗೊಂಡಿದೆ. 400 ಕಿ.ಮೀ ದೂರದ ಗುರಿಯನ್ನು ತಲುಪಿದೆ. * ಭಾರತೀಯ ವಾಯುಪಡೆ, ಭಾರತೀಯ ನೌಕಾಪಡೆ, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್), ಬ್ರಹ್ಮೋಸ್ ಏರೋಸ್ಪೇಸ್ (ಬಿಎಪಿಎಲ್), ಹಾಗೂ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ) ಗಳ ಒಟ್ಟು ಪ್ರಯತ್ನದ ಪರಿಣಾಮವಾಗಿ ಈ ಪರೀಕ್ಷೆಯು ಯಶಸ್ವಿಯಾಗಿದೆ.