Job Description: * ಬೆಂಗಳೂರು ವಿಶ್ವ ವಿದ್ಯಾಲಯಯು ಅಂತಿಮ ಬಿ.ಕಾಂ ವಿದ್ಯಾರ್ಥಿಗಳ ಕನ್ನಡ ಪಠ್ಯದಲ್ಲಿ ಪುನೀತ್ ರಾಜ್ ಕುಮಾರ್ ಕುರಿತ ಪಾಠವನ್ನು ಅಳವಡಿಸುತ್ತಿದೆ.* ಅಕಾಲಿಕ ಮರಣ ಕಂಡ ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜೀವನಚರಿತ್ರೆ, ಸಮಾಜ ಸೇವೆಯ ಮೌಲ್ಯಗಳನ್ನು ಸಾರುವ ಪಠ್ಯವನ್ನು ಶಾಲಾ ಮಕ್ಕಳ ಪಠ್ಯಕ್ರಮದಲ್ಲಿ ಅಳವಡಿಸಿಕೊಳ್ಳಬೇಕೆಂಬ ಬೇಡಿಕೆ ಕಳೆದೊಂದು ವರ್ಷದಿಂದ ಕೇಳಿಬರುತ್ತಲೇ ಇದೆ.* ಅಪ್ಪು ಅಭಿಮಾನಿಗಳ ಸಂಘಗಳು ಪುನೀತವರ್ ಕುರಿತು ಪಠ್ಯದಲ್ಲಿ ಸೇರಿಸಬೇಕೆಂದು ಸರ್ಕಾರಕ್ಕೆ ಪತ್ರವನ್ನೂ ಸಹ ಬರೆದಿದ್ದವು. ಶಿಕ್ಷಣ ಸಚಿವರನ್ನು ಭೇಟಿ ಮಾಡಿ ಮನವಿ ಪತ್ರವನ್ನೂ ಸಹ ನೀಡಿದ್ದವು. ಇದೀಗ ಅಭಿಮಾನಗಳ ಆಶಯ ಬೆಂಗಳೂರು ವಿಶ್ವವಿದ್ಯಾಲಯವು ಸಾಕಾರಗೊಲಿಸಿದೆ.