Job Description: * ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಶ್ರೀಲಂಕಾಗೆ ಭಾರತವು ಹಲವಾರು ರೀತಿಯಲ್ಲಿ ನೆರವಾಗಿದೆ. ಪ್ರಸ್ತುತ ಶ್ರೀಲಂಕಾ ಪೊಲೀಸರಿಗಾಗಿ 125 ಎಸ್ ಯುವಿ ಗಳನ್ನೂ ಹಸ್ತಾಂತರಿಸಿದೆ. * ಭಾರತವು "ಲೈನ್ ಆಫ್ ಕ್ರೆಡಿಟ್" ಅಡಿಯಲ್ಲಿ ಒಟ್ಟು 500 ಅತ್ಯಾಧುನಿಕ ಎಸ್ ಯುವಿ ಗಳನ್ನೂ ನೀಡುವ ಒಪ್ಪಂದಕ್ಕೆ 2022 ರ ಆರಂಭದಲ್ಲಿ ಸಹಿ ಹಾಕಲಾಗಿತ್ತು. ಈಗ 125 ಎಸ್ ಯುವಿ ಗಳನ್ನೂ ಕಳುಹಿಸಲಾಗಿದ್ದು ಉಳಿದವುಗಳನ್ನು ಅತಿ ಶೀಘ್ರದಲ್ಲೇ ಕಳುಹಿಸಲಾಗುತ್ತದೆ ಎಂದು ಹೇಳಲಾಗಿದೆ.