Job Description: * ಭಾರತೀಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆ ಲಿಮಿಟೆಡ್ (ಐಆರ್ ಇಡಿಎ) ಇಂದು ರಾಜಸ್ಥಾನದ ಬಿಕಾನೇರ್ ನಲ್ಲಿ 1,000 ಮೆಗಾವ್ಯಾಟ್ ಸೌರ ವಿದ್ಯುತ್ ಯೋಜನೆಗಾಗಿ ಎಸ್ ಜೆವಿಎನ್ ಗ್ರೀನ್ ಎನರ್ಜಿ ಲಿಮಿಟೆಡ್ ನೊಂದಿಗೆ (ಎಸ್ ಜೆವಿಎನ್ ಲಿಮಿಟೆಡ್ ನ ಅಂಗಸಂಸ್ಥೆ) 4,444.71 ಕೋಟಿ ರೂ.ಗಳ ಐತಿಹಾಸಿಕ ಸಾಲದ ಒಪ್ಪಂದಕ್ಕೆ ಸಹಿ ಹಾಕಿದೆ.* ಈ ಐಆರ್ ಇಡಿಎ ಅನುದಾನಿತ ಯೋಜನೆಯು ಬಿಕಾನೇರ್ ಬಳಿಯ 400/220 ಕಿಲೊವ್ಯಾಟ್ ಸಬ್ ಸ್ಟೇಷನ್ ಬಿಕಾನೇರ್-2 ಕ್ಕೆ ಸಂಪರ್ಕ ಕಲ್ಪಿಸುತ್ತದೆ. ವಿಜಿಎಫ್ ಬೆಂಬಲದ ಆಧಾರದ ಮೇಲೆ ಸ್ಪರ್ಧಾತ್ಮಕ ಬಿಡ್ಡಿಂಗ್ ಪ್ರಕ್ರಿಯೆಯ ಮೂಲಕ ಗ್ರಿಡ್ ಸಂಪರ್ಕಿತ ಸೌರ ಪಿವಿ ವಿದ್ಯುತ್ ಯೋಜನೆಯನ್ನು ಅಭಿವೃದ್ಧಿಪಡಿಸಲು ಸಿಪಿಎಸ್ ಯು ಎರಡನೆಯ ಹಂತದ ಮೂರನೇ ಕಂತಿನ ಯೋಜನೆಯಡಿ ಐಆರ್ ಇಡಿಎ ಆಹ್ವಾನಿಸಿದ ಟೆಂಡರ್ ಮೂಲಕ ಎಸ್ ಜೆವಿಎನ್ ಈ ಯೋಜನೆಯನ್ನು ಪಡೆದುಕೊಂಡಿದೆ.