Job Description: * ಭಾರತವು ಜಿ-20 ಶೃಂಗ ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡ ನಂತರ ಮೊದಲ ಹಣಕಾಸು ಹಾಗೂ ಕೇಂದ್ರ ಬ್ಯಾಂಕನ ನಿಯೋಗಗಳ 3 ದಿನಗಳ ಸಭೆಯನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ.* ರಾಜ್ಯದ ಪ್ರಥಮ ಸಭೆಯು ದೇವನಹಳ್ಳಿ ಸಮೀಪದ ರೆಸಾರ್ಟ್ಸ್ ನಲ್ಲಿ ಜಿ-20 ಶೃಂಗ ಸಭೆಯು ನಡೆಯಲಿದೆ.* ಕರ್ನಾಟಕದಲ್ಲಿ 14 ಪೂರ್ವ ಭಾವಿ ಸಭೆಗಳು ನಡೆಯಲಿವೆ. ಇದೆ ಡಿಸೇಂಬರ್ 16 ಹಾಗೂ 17 ರಂದು ಮೊದಲ ನೀತಿ ನಿರೂಪಣಾ ಕಾರ್ಯತಂತ್ರ ಸಭೆ ನಡೆಯಲಿದೆ.* ಜಿ-20 ಶೃಂಗದ ಪೂರ್ವಭಾವಿಯಾಗಿ 14 ಸಭೆಗಳು ಕರ್ನಾಟಕದಲ್ಲಿ ನಡೆಯಲಿವೆ. ಈ ಪೈಕಿ ಬಹುಪಾಲು ಅಂದರೆ 11 ಸಭೆಗಳು ಬೆಂಗಳೂರಿನಲ್ಲಿ, ಎರಡು ಸಭೆ ಹಂಪಿಯಲ್ಲಿ ಹಾಗೂ ಒಂದು ಸಭೆ ಮೈಸೂರಿನಲ್ಲಿ ನಡೆಯಲಿದೆ. * ಈ ಮೂಲಕ ದಿಲ್ಲಿಯ ಎನ್‌ಸಿಆರ್‌ ನಂತರದ ಅತಿ ಹೆಚ್ಚು ಸಭೆ ನಡೆಯುವ ರಾಜ್ಯವೆಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ. ವಿದೇಶಿ ಗಣ್ಯರು, ಪ್ರತಿನಿಧಿಗಳಿಗೆ ರಾಜ್ಯದ ಪ್ರವಾಸಿ ತಾಣಗಳ ವೈವಿಧ್ಯ, ಸೊಬಗು, ಪ್ರವಾಸೋದ್ಯಮ ಸೌಲಭ್ಯಗಳ ಬಗ್ಗೆ ಆಕರ್ಷಿಸಲು ಪ್ರವಾಸೋದ್ಯಮ ಇಲಾಖೆ ಸಜ್ಜಾಗಿದೆ.