Job Description: * ಏರ್‌ಬಸ್ ಮತ್ತು ಬೋಯಿಂಗ್‌ ಸಂಸ್ಥೆಗಳಿಂದ ಶತಕೋಟಿ ಮೌಲ್ಯದ ಸುಮಾರು 500 ವಿಮಾನಗಳ ಖರೀದಿಗೆ ಏರ್ ಇಂಡಿಯಾ ಮುಂದಾಗಿದೆ* ವಿಮಾನಯಾನ ಉದ್ಯಮದ ಮೂಲಗಳ ಪ್ರಕಾರ 400 ಕಿರಿದಾದ-ದೇಹದ ಜೆಟ್‌ಗಳು ಮತ್ತು ಏರ್‌ಬಸ್ A350 ಗಳು ಮತ್ತು ಬೋಯಿಂಗ್ 787 ಮತ್ತು 777 ಗಳು ಸೇರಿದಂತೆ 100 ಅಥವಾ ಅದಕ್ಕಿಂತ ಹೆಚ್ಚು ದೊಡ್ಡ ಪ್ರಯಾಣಿಕ ವಿಮಾನಗಳನ್ನು ಖರೀದಿ ಮಾಡುವ ಯೋಜನೆ ರೂಪಿಸಲಾಗಿದೆ ಎಂದು ತಿಳಿದುಬಂದಿದೆ.* ಏರ್ ಇಂಡಿಯಾ ದೇಶದ ಅತಿದೊಡ್ಡ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆ, ಎರಡನೇ ಅತಿದೊಡ್ಡ ಸ್ಥಳೀಯ ವಿಮಾನಯಾನ ಸಂಸ್ಥೆಯಾಗಿ ಗುರುತಿಸಿಕೊಳ್ಳಲಿದೆ.* 2021ರಲ್ಲಿ ಆಕಾಸ ಏರ್ಲೈನ್ 72 ‘737 ಮ್ಯಾಕ್ಸ್’ ವಿಮಾನ ಖರೀದಿಗೆ ಆರ್ಡರ್ ಮಾಡಿದ್ದು ಬಿಟ್ಟರೆ ನಂತರ ಯಾವುದೇ ಆರ್ಡರ್ ಬೋಯಿಂಗ್ಗೆ ಸಿಕ್ಕಿರಲಿಲ್ಲ.