Job Description: * ಚಂದ್ರನ ಮೇಲೆ ಮೊಟ್ಟ ಮೊದಲ ಬಾರಿಗೆ ಮಾನವ ಕಾಲಿಟ್ಟು ಜುಲೈ 20 ಕ್ಕೆ 50 ವರ್ಷ ಸಂದಿದೆ. * 1929 ರಲ್ಲಿಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ‘ಅಪೋಲೋ-11’ ನೌಕೆ ಮೂಲಕ ಈ ಐತಿಹಾಸಿಕ ಸಾಧನೆ ಮಾಡಿ ಇಡೀ ವಿಶ್ವವನ್ನೇ ನಿಬ್ಬೆರಗು ಮಾಡಿತು. * ಗಗನಯಾತ್ರಿಗಳಾದ ನೀಲ್ ಆರ್ಮ್‌ಸ್ಟ್ರಾಂಗ್, ಬುಝ್ ಆಲ್ಡ್ರಿನ್ ಮತ್ತು ಮೈಕಲ್ ಕಾಲಿನ್ಸ್ ಚಂದ್ರನ ಮೇಲೆ ಇಳಿದು, ಮಣ್ಣಿನ ಮಾದರಿ ಸಂಗ್ರಹಿಸಿ ಜುಲೈ 21 ರಂದು ಹಿಂದಿರುಗಿದ್ದರು. ಈ ಹಿನ್ನೆಲೆಯಲ್ಲಿ ಮೊದಲ ಮಾನವ ಸಹಿತ ಚಂದ್ರಯಾನ ಹೇಗಿತ್ತು ಎಂಬ ಕುತೂಹಲಕಾರಿ ಮಾಹಿತಿ ಇಲ್ಲಿದೆ.* ಜುಲೈ 15 ರಂದು ಅಮೆರಿಕ ಮಾನವ ಸಹಿತ ಚಂದ್ರಯಾನಕ್ಕೆ ಸಿದ್ಧವಾಯಿತು. * ಮೂವರು ಮಾನವರನ್ನು ಹೊತ್ತ ಸ್ಯಾಟರ್ನ್ ವಿ ರಾಕೆಟನ್ನು ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದ ಮೂಲಕ ಜುಲೈ 16, 1929 ರಂದು ಉಡಾವಣೆ ಮಾಡಲಾಯಿತು. * ಅದು ಜುಲೈ 20 ರಂದು ಅಂದರೆ ಭೂಮಿಯಿಂದ ಹೊರಟು ಸುಮಾರು 110 ಗಂಟೆಗಳ ನಂತರ ಚಂದ್ರನ ಕಕ್ಷೆ ತಲುಪಿತು.* ಮೊಟ್ಟ ಮೊದಲ ಬಾರಿಗೆ ಚಂದ್ರನ ಮೇಲೆ ಕಾಲಿಟ್ಟ ನೀಲ್ ಆಮ್ ರ್ಸ್ಟ್ರಾಂಗ್ ‘ಒಬ್ಬ ಮನುಷ್ಯನಿಗೆ ಅದೊಂದು ಪುಟ್ಟ ಹೆಜ್ಜೆ. ಆದರೆ ಮಾನವ ಕುಲಕ್ಕೆ ಅದೊಂದು ದೈತ್ಯ ಹೆಜ್ಜೆ’ ಎಂದಿದ್ದು ಭೂಮಿಯ ಟಿವಿಗಳಲ್ಲಿ ಪ್ರಸಾರವಾಗಿತ್ತು. ಅವರು ಕಾಲಿಟ್ಟ 20 ನಿಮಿಷದ ನಂತರ ಬುಝ್ ಅಲ್ಡ್ರಿನ್ ಚಂದ್ರನಲ್ಲಿ ಪಾದಾರ್ಪಣೆ ಮಾಡಿದರು. ಮೈಕಲ್ ಕಾಲಿನ್ಸ್ ಮಾಡ್ಯೂಲ್ ಪೈಲಟ್ ಆಗಿದ್ದರಿಂದ ಅವರು ಚಂದ್ರನ ಮೇಲೆ ನಡೆದಾಡಲು ಸಾಧ್ಯವಾಗಲಿಲ್ಲ.* ಚಂದ್ರಯಾನ ಮಾಡಿದ ಮೂವರಲ್ಲಿ ಇಬ್ಬರು ಲೂನಾರ್ ಮಾಡ್ಯೂಲ್‌ನಿಂದ ಆಚೆ ಬಂದು, ಚಂದ್ರನ ಮೇಲೆ 21 ಗಂಟೆ 36 ನಿಮಿಷ ಕಾಲ ಕಳೆದರು. ಈ ವೇಳೆ ಚಂದ್ರ ಮೇಲ್ಮೈನಲ್ಲಿ ಲಭ್ಯವಿರುವ ಮಣ್ಣು ಮತ್ತು ಧೂಲಿನ ಮಾದರಿ ಪಡೆದಿದ್ದರು. ಅದು ಮುಂದೆ ಹಲವು ವೈಜ್ಞಾನಿಕ ಅನ್ವೇಷಣೆಗಳಿಗೆ ಕಾರಣೀಭೂತವಾಯಿತು. * ಜುಲೈ 21 ರಂದು ಸರ್ವೀಸ್ ಮಾಡ್ಯೂಲ್ ಮತ್ತು ಲೂನಾರ್ ಮಾಡ್ಯೂಲ್ ಸಹಾಯದಿಂದ ಭೂಮಿಗೆ ಹಿಂದಿರುಗಿದರು. ಅದು ಜುಲೈ 24 ರಂದು ಪೆಸಿಫಿಕ್ ಸಮುದ್ರಕ್ಕೆ ಬಂದು ಬಿತ್ತು. ಅಮೆರಿಕದ ಈ ಅಭೂತಪೂರ್ವ ಸಾಹಸವನ್ನು ಸುಮಾರು 65 ಕೋಟಿ ಜನರು ಕಣ್ತುಂಬಿಕೊಂಡಿದ್ದರು. * 1957 ರಲ್ಲಿ ಸೋವಿಯತ್ ರಷ್ಯಾ ‘ಸ್ಪುಟ್ನಿಕ್’ ಎಂಬ ಭೂಮಿಯ ಮೊದಲ ಕೃತಕ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಕಳುಹಿಸಿತ್ತು. ಅನಂತರ 1961 ರಲ್ಲಿ ರಷ್ಯಾದ ಯೂರಿ ಗಗಾರಿನ್ ಗಗನನೌಕೆಯಲ್ಲಿ ಕುಳಿತು ಬಾಹ್ಯಾಕಾಶ ಯಾನ ಕೈಗೊಂಡರು. * ಆ ವೇಳೆಗಾಗಲೇ ರಷ್ಯಾ ಮತ್ತು ಅಮೆರಿಕ ನಡುವೆ ಶೀತಲ ಸಮರ ನಡೆಯುತ್ತಿದ್ದ ಕಾರಣ ಎರಡೂ ದೇಶಗಳು ಶಸ್ತ್ರಾಸ್ತ್ರ ಪೈಪೋಟಿಯ ಜೊತೆಗೆ ಬಾಹ್ಯಾಕಾಶ ಸಾಧನೆ ವಿಷಯದಲ್ಲೂ ಪೈಪೋಟಿ ಆರಂಭಿಸಿದವು. * ಇದೇ ಕಾರಣಕ್ಕೆ 1962 ರಲ್ಲಿ ಮೊದಲಬಾರಿಗೆ ‘ಚಂದ್ರನಲ್ಲಿಗೆ ಹೋಗುತ್ತಿದ್ದೇವೆ’ ಎಂದು ಅಮೆರಿಕ ಅಧ್ಯಕ್ಷರಾಗಿದ್ದ ಕೆನಡಿ ಘೋಷಿಸಿದರು.