Job Description: * ಲಲಿತ್ ಕಾಲ ಅಕಾಡೆಮಿ ಮಾಜಿ ಅಧ್ಯಕ್ಷ ಡಿ.ಮಹೇಂದ್ರ ಅಧ್ಯಕ್ಷತೆಯ ಸಮಿತಿಯು ಸರ್ಕಾರಕ್ಕೆ ರಾಜ್ಯದ ಸಾಂಪ್ರದಾಯಿಕ ಕಲೆ ಹಾಗೂ ನಾಡಗೀತೆಯಲಿರುವ ಕೆಲವು ಅಂಶಗಳನ್ನು ಸಾಂಕೇತಿಕವಾಗಿ ಬಿಂಬಿಸುವ ಚಿತ್ರವನ್ನು ನಾಡದೇವತೆಯ ಅಧಿಕೃತ ಚಿತ್ರವೆಂದು ಪರಿಗಣಿಸಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.* ಈ ಅಧಿಕೃತ ನಾಡದೇವತೆಯ ಚಿತ್ರವನ್ನು ಚಿತ್ರ ಕಲಾವಿದ ಕೆ. ಸೋಮಶೇಖರ್ ಸಿದ್ಧಪಡಿಸಿದ್ದಾರೆ. * ನಾಡದೇವತೆಯ ಪ್ರಮಾಣಿತ ಹಾಗೂ ಅಧಿಕೃತ ಚಿತ್ರವನ್ನು ಆಯ್ಕೆ ಮಾಡಿ ಶಿಫಾರಸ್ಸು ಮಾಡಲು 2021 ರ ಸೆಪ್ಟೆಂಬರ್ 23 ರಂದು ಮಹೇಂದ್ರ ನೇತೃತ್ವದಲ್ಲಿ ಚಿತ್ರ ಕಲಾವಿದರ ಸಮಿತಿಯನ್ನು ನೇಮಿಸಲಾಗಿತ್ತು.* ಬೆಂಗಳೂರಿನ ಚೂಡಾಮಣಿ ನಂದಗೋಪಾಲ್, ರಾಯಚೂರಿನ ಎಚ್, ಎಚ್, ಮ್ಯಾದರ್, ಬೆಳಗಾವಿಯ ಬಾಬು ನಡೋಣಿ, ವಿಜಯಪುರದ ವಿ,ಎಸ್ ಕಡೇಮನಿ ಶಾಂತಿಯ ಸದಸ್ಯರಾಗಿದ್ದರು.