Job Description: * ವಿಶ್ವದ ಅತ್ಯುತ್ತಮ ಚಲನಚಿತ್ರಗಳು ಮತ್ತು ಅವುಗಳ ನಿರ್ಮಾತೃಗಳನ್ನು ಒಂದೇ ಸೂರಿನಡಿಯಲ್ಲಿ ಮತ್ತೊಮ್ಮೆ ಒಗ್ಗೂಡಿಸಿರುವ 53 ನೇ ಆವೃತ್ತಿಯ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವವು ಇಂದು ನವೆಂಬರ್ 20 ರಂದು ಗೋವಾದ ಪಣಜಿಯಲ್ಲಿರುವ ಡಾ.ಶ್ಯಾಮ ಪ್ರಸಾದ್ ಮುಖರ್ಜಿ ಒಳಾಂಗಣ ಕ್ರೀಡಾಂಗಣದಲ್ಲಿ ಅದ್ದೂರಿ ಉದ್ಘಾಟನಾ ಸಮಾರಂಭದೊಂದಿಗೆ ಪ್ರಾರಂಭವಾಯಿತು. * ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ ಮತ್ತು ಗೋವಾದ ಎಂಟರ್‌ಟೈನ್‌ಮೆಂಟ್ ಸೊಸೈಟಿ ಜಂಟಿಯಾಗಿ ಆಯೋಜಿಸಿರುವ ಈ ಸಿನಿಮಾ ಉತ್ಸವದಲ್ಲಿ 79 ದೇಶಗಳ 280 ಚಲನಚಿತ್ರಗಳು ಪ್ರದರ್ಶನವಾಗುತ್ತಿವೆ. 25 ಫೀಚರ್‌ ಮತ್ತು 20 ನಾನ್‌ ಫೀಚರ್‌ ಚಲನಚಿತ್ರಗಳನ್ನು ಭಾರತೀಯ ಪನೋರಮಾ ವಿಭಾಗದಲ್ಲಿ ಪ್ರದರ್ಶಿಸಲಾಗುತ್ತದೆ.* ಒಂಬತ್ತು ದಿನಗಳ ಶ್ರೇಷ್ಠ ಸಿನಿಮಾ ಯಾನವನ್ನು ದೀಪವನ್ನು ಬೆಳಗಿಸಿ ಉದ್ಘಾಟಿಸಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಮತ್ತು ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್, ಭಾರತವನ್ನು ಚಲನಚಿತ್ರ ಚಿತ್ರೀಕರಣ ಮತ್ತು ಚಿತ್ರೀಕರಣ ನಂತರದ ಕೆಲಸಗಳಿಗೆ ನಮ್ಮ ಜನರ ಪ್ರತಿಭೆ ಮತ್ತು ನಮ್ಮ ಉದ್ಯಮದ ನಾಯಕರ ನಾವೀನ್ಯತೆಯ ಬೆಂಬಲದೊಂದಿಗೆ ಹೆಚ್ಚು ಬೇಡಿಕೆಯಿರುವ ತಾಣವನ್ನಾಗಿ ಮಾಡುವುದು ತಮ್ಮ ಗುರಿಯಾಗಿದೆ ಎಂದು ಹೇಳಿದರು.* 53ನೇ ಐಎಫ್‌ಎಫ್‌ಐ ಅಸಂಖ್ಯಾತ ರೋಮಾಂಚಕ ಸಂಸ್ಕೃತಿಗಳ ಸಮ್ಮಿಲನ ಮತ್ತು ಸಿನಿಮೀಯ ಶ್ರೇಷ್ಠತೆಯ ಕೈಗನ್ನಡಿಯಾಗಲಿದೆ ಎಂದು ಶ್ರೀ ಠಾಕೂರ್ ಹೇಳಿದರು. ಐಎಫ್‌ಎಫ್‌ಐ ಯುವ ಮತ್ತು ಸ್ಥಾಪಿತ ಚಲನಚಿತ್ರ ನಿರ್ಮಾಪಕರಿಗೆ ನೆಟ್‌ವರ್ಕ್, ಸಹಯೋಗ ಮತ್ತು ಸಿನಿಮಾ ಪ್ರಪಂಚದ ಅತ್ಯುತ್ತಮವಾದ ಅನುಭವ, ಅನನ್ಯ ಅವಕಾಶಗಳು ಮತ್ತು ಸಾಧ್ಯತೆಗಳನ್ನು ಒದಗಿಸುತ್ತದೆ. * ಸಿನಿಮಾ ದೇಶದ ಶ್ರೀಮಂತ ಸಂಸ್ಕೃತಿ, ಪರಂಪರೆ, ಸಂಪ್ರದಾಯ, ಭರವಸೆಗಳು ಮತ್ತು ಕನಸುಗಳು, ಆಕಾಂಕ್ಷೆಗಳು, ಮಹತ್ವಾಕಾಂಕ್ಷೆಗಳು ಮತ್ತು ಮುಖ್ಯವಾಗಿ ಇತಿಹಾಸದ ಯಾವುದೇ ಸಮಯದ ಜನರ ಸಾಮೂಹಿಕ ಪ್ರಜ್ಞೆಯ ಸಂಗಮವನ್ನು ಸೆರೆಹಿಡಿಯುತ್ತದೆ ಎಂದು ಅವರು ಹೇಳಿದರು.* 75 ನೇ ಕಾನ್‌ ಚಲನಚಿತ್ರೋತ್ಸವದಲ್ಲಿ ಭಾರತದ 'ಕಂಟ್ರಿ ಆಫ್ ಆನರ್' ನ ಉತ್ಸಾಹವನ್ನು ಮುಂದುವರೆಸುತ್ತಾ, ಐಎಫ್‌ಎಫ್‌ಐನ 53 ನೇ ಆವೃತ್ತಿಯಲ್ಲಿ 'ಕಂಟ್ರಿ ಆಫ್ ಫೋಕಸ್' ಆಗಿ ಫ್ರಾನ್ಸ್ ಅನ್ನು ಸ್ವಾಗತಿಸಲಾಗಿದೆ.* ಜೀವಮಾನ ಪ್ರಶಸ್ತಿ ಪುರಸ್ಕೃತರು, ಎನ್‌ಎಫ್‌ಎ, ಗ್ರ್ಯಾಮಿ ಮತ್ತು ಆಸ್ಕರ್ ವಿಜೇತರನ್ನು ಒಳಗೊಂಡ ಪ್ರಖ್ಯಾತ ತೀರ್ಪುಗಾರರ ತಂಡವು ಸುಮಾರು 1000 ಪ್ರವೇಶಗಳಿಂದ ನಿರ್ದೇಶನ, ಸಂಪಾದನೆ, ಹಿನ್ನೆಲೆ ಗಾಯನ, ಕಥೆ, ಅನಿಮೇಷನ್ ಮತ್ತು ನಟನೆ ಮುಂತಾದ 10 ವಿಭಾಗಗಳಲ್ಲಿ ಆಯ್ಕೆ ಮಾಡಿದೆ. ಇವರು 19 ರಾಜ್ಯಗಳನ್ನು ಪ್ರತಿನಿಧಿಸುತ್ತಿದ್ದು, ಜೈನ್ತಿಯಾ ಹಿಲ್ಸ್ (ಮೇಘಾಲಯ), ಲಖಿಂಪುರ (ಅಸ್ಸಾಂ), ಖೋರ್ದಾ (ಒಡಿಸ್ಸಾ) ದಂತಹ ಸ್ಥಳಗಳಿಂದ ಬಂದಿದ್ದಾರೆ ಮತ್ತು ಇವರ ಪೈಕಿ 18 ವರ್ಷದ ಅತ್ಯಂತ ಕಿರಿಯರು ಇದ್ದಾರೆ. * ಈ ವರ್ಷ ಸತ್ಯಜಿತ್ ರೇ ಜೀವಮಾನ ಸಾಧನೆ ಪ್ರಶಸ್ತಿಯನ್ನು ಗೆದ್ದಿರುವ ಸ್ಪ್ಯಾನಿಷ್ ಚಲನಚಿತ್ರ ನಿರ್ದೇಶಕ ಕಾರ್ಲೋಸ್ ಸೌರಾ ಅವರನ್ನು ಸಚಿವರು ಅಭಿನಂದಿಸಿದರು. ದಕ್ಷಿಣ ಭಾರತದ ನಟ ಚಿರಂಜೀವಿ ಅವರಿಗೆ ವರ್ಷದ ಭಾರತೀಯ ಚಲನಚಿತ್ರ ವ್ಯಕ್ತಿ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಸಚಿವರು ಘೋಷಿಸಿದರು.* ಐಎಫ್‌ಎಫ್‌ಐನ ಈ ಆವೃತ್ತಿಯು 50 ವರ್ಷಗಳ ಮಣಿಪುರಿ ಸಿನೆಮಾವನ್ನು ಸ್ಮರಿಸುತ್ತದೆ. ವಿಶೇಷವಾಗಿ ಕ್ಯುರೇಟೆಡ್ ಪ್ಯಾಕೇಜ್‌ನಲ್ಲಿ ಗಮನಾರ್ಹವಾದ ಫೀಚರ್‌ ಮತ್ತು ನಾನ್‌ ಫೀಚರ್‌ ಮಣಿಪುರಿ ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ ಎಂದು ಅವರು ಹೇಳಿದರು.* ಐಎಫ್‌ಎಫ್‌ಐ ಸಂದರ್ಭದಲ್ಲಿ ಏರ್ಪಡಿಸಲಾಗುತ್ತಿರುವ ಫಿಲ್ಮ್ ಬಜಾರ್‌ನ ಪ್ರಾಮುಖ್ಯತೆಯ ಬಗ್ಗೆಯೂ ಶ್ರೀ ಅನುರಾಗ್ ಠಾಕೂರ್ ಗಮನಸೆಳೆದರು. ಮೊದಲ ಬಾರಿಗೆ, ಐಎಫ್‌ಎಫ್‌ಐ ಕಂಟ್ರಿ ಪೆವಿಲಿಯನ್‌ಗಳನ್ನು ಪರಿಚಯಿಸುವ ಮೂಲಕ ಫಿಲ್ಮ್ ಬಜಾರ್‌ನ ವ್ಯಾಪ್ತಿಯನ್ನು ಹೆಚ್ಚಿಸಲಾಗಿದೆ.