Job Description: * ಟಿಬೆಟ್ ನ ಧರ್ಮಗುರು ದಲೈಲಾಮಾ ಅವರಿಗೆ ನವೆಂಬರ್ 19 ರಂದು ನಡೆದ ಸಮಾರಂಭದಲ್ಲಿ "ಗಾಂಧಿ ಮಂಡೇಲಾ" ಪ್ರಶಸ್ತಿ ನೀಡಿ ಗೌರವಿಸಲಾಯಿತು.* ಗಾಂಧಿ ಮಂಡೇಲಾ ಫೌಂಡೇಶನ್ ಆಯೋಜಿಸಿದ್ದ ಸಮಾರಂಭದಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಆರ್ಲೆಕರ್ ಪ್ರಶಸ್ತಿ ಪ್ರಧಾನ ಮಾಡಲಾಯಿತು. * ವಿಶ್ವದಲ್ಲಿಯೇ ಈ ಪ್ರಶಸ್ತಿಗೆ ದುಲೈಲಾಮಾ ಸೂಕ್ತ ವ್ಯಕ್ತಿ ಎಂದು ಶ್ಲಾಘಿಸಿದರು. * ದಲೈಲಾಮಾ ಶಾಂತಿಯ ರಾಯಭಾರಿಯಾಗಿದ್ದಾರೆ, ಅಹಿಂಸೆಯ ಕುರಿತು ಅವರು ಸಿದ್ಧಾಂತ ಪ್ರಸ್ತುತ ಜಗತ್ತಿಗೆ ಅಗತ್ಯವಾಗಿದ್ದು, ಇದು ಸೇನೆಗಿಂತಲೂ ಹೆಚ್ಚು ಪರಿಣಾಮಕಾರಿಯಾದುದು ಎಂದು ರಾಜ್ಯಪಾಲರು ಹೇಳಿದರು.* ದಲೈಲಾಮಾ ಅವರಿಗೆ ಗಡಿಯ ಮಿತಿ ಇಲ್ಲ. ಮಹಾತ್ಮಾ ಗಾಂಧಿ, ನೆಲ್ಸನ್ ಮಂಡೇಲಾ ಬಳಿಕ ವಿಶ್ವನಾಯಕರಾಗುವ ಅರ್ಹತೆ ಹೊಂದಿದ್ದಾರೆ ಎಂದು ಹೇಳಲಾಗಿದೆ. * ಪ್ರಶಸ್ತಿ ಸ್ವೀಕರಿಸಿದ ದಲೈಲಾಮಾ ರವರು, ಅಹಿಂಸೆ ಮತ್ತು ಸಹಾನುಭೂತಿ ಪ್ರಸ್ತುತ ವಿಶ್ವಶಾಂತಿಗೆ ಅಗತ್ಯವಾಗಿ ಬೇಕಾಗಿದೆ. ಶಾಂತಿ ಮತ್ತು ಚರ್ಚೆಯಿಂದ ಯಾವುದೇ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು ಎಂದು ಹೇಳಿದರು.