Job Description: * ಪ್ರತಿ ಸ್ಥಳೀಯ ಮಾತೃಭಾಷೆಯ ಅಸ್ಮಿತೆಯನ್ನು ಸಂರಕ್ಷಿಸಲು ಮತ್ತು ವಿಶ್ಲೇಷಿಸುವ ಉದ್ದೇಶದಿಂದ ದೇಶದ 576 ಮಾತೃಭಾಷೆಗಳ ಸಮೀಕ್ಷೆ ಮತ್ತು ಕ್ಷೇತ್ರೀಯ ವಿಡಿಯೊಗ್ರಫಿಯನ್ನು ಕೇಂದ್ರ ಗೃಹ ಸಚಿವಾಲಯ ಯಶಸ್ವಿಯಾಗಿ ಪೂರ್ಣಗೊಳಿಸಿದೆ.* ಪ್ರತಿ ಮಾತೃ ಭಾಷೆ ಹಾಗೂ ಆ ಭಾಷೆಗೆ ಸಂಬಂಧಿಸಿದ ಉಪ ಭಾಷೆಗಳ ಸಮೀಕ್ಷೆಯನ್ನು ಪೂರ್ಣಗೊಳಿಸಿರುವುದಾಗಿ ಕೇಂದ್ರ ಸರ್ಕಾರ ತಿಳಿಸಿದ್ದು, ರಾಷ್ಟ್ರೀಯ ಮಾಹಿತಿ ಕೇಂದ್ರದಲ್ಲಿ (ಎನ್‌ಐಸಿ) ವೆಬ್ ದಸ್ತಾವೇಜು (ಆರ್ಕೈವ್) ಸ್ಥಾಪಿಸಲು ಯೋಜಿಸಲಾಗಿದೆ ಎಂದು ಗೃಹ ಸಚಿವಾಲಯದ 2021-22 ರ ವಾರ್ಷಿಕ ವರದಿಯಲ್ಲಿ ಹೇಳಲಾಗಿದೆ. * ಆಂತರಿಕ ಭಾಷಾಶಾಸ್ತ್ರಜ್ಞರಿಂದ ಭಾಷಾ ದತ್ತಾಂಶಗಳ ಜೋಡಣೆ ಮತ್ತು ಸಂಪಾದನಾ ಪ್ರಕ್ರಿಯೆ ಮುಂದುವರೆದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.* ಭಾರತದ ಮಾತೃಭಾಷಾ ಸಮೀಕ್ಷೆ (ಎಮ್‌ಟಿಎಸ್‌ಐ) ಯೋಜನೆಯು 576 ಮಾತೃಭಾಷೆಗಳ ಕ್ಷೇತ್ರೀಯ ವೀಡಿಯೊಗ್ರಫಿಯೊಂದಿಗೆ ಯಶಸ್ವಿಯಾಗಿ ಪೂರ್ಣಗೊಂಡಿದೆ’ ಎಂದು ವರದಿಯಲ್ಲಿ ತಿಳಿಸಿದೆ. * ದೇಶದ 6 ನೇ ಪಂಚವಾರ್ಷಿಕ ಯೋಜನೆಯಿಂದಲೂ ಭಾರತದಲ್ಲಿ ಭಾಷಾ ಸಮೀಕ್ಷೆ (ಎಲ್‌ಎಸ್‌ಐ) ನಿಯಮಿತ ಸಂಶೋಧನಾ ಚಟುವಟಿಕೆಯಾಗಿ ನಡೆದುಕೊಂಡು ಬಂದಿದೆ ಎಂದು ಗೃಹ ಸಚಿವಾಲಯ ವರದಿಯಲ್ಲಿ ತಿಳಿಸಿದೆ.* ಈ ಯೋಜನೆಯಡಿಯಲ್ಲಿನ ಭಾಗವಾಗಿ ಜಾರ್ಖಂಡ್‌ನ ಸಂಪುಟವನ್ನು ಪೂರ್ಣಗೊಳಿಸಲಾಗಿದ್ದು, ಹಿಮಾಚಲ ಪ್ರದೇಶದ ಸಮೀಕ್ಷೆಯೂ ಪೂರ್ಣಗೊಳ್ಳುತ್ತಿದೆ. * ತಮಿಳುನಾಡು ಮತ್ತು ಉತ್ತರ ಪ್ರದೇಶದ ಕ್ಷೇತ್ರಗಳಲ್ಲಿ ಸಮೀಕ್ಷೆ ಮುಂದುವರೆಯುತ್ತಿದೆ ವರದಿ ತಿಳಿಸಿದೆ. ಅಂತೆಯೇ ದಸ್ತಾವೇಜು ಉದ್ದೇಶಗಳಿಗಾಗಿ ವೀಡಿಯೊಗ್ರಾಫ್ ಮಾಡಿದ ಮಾತೃಭಾಷೆಗಳ ಭಾಷಣದ ಡೇಟಾವನ್ನು ಎನ್‌ಐಸಿ ಸರ್ವರ್‌ನಲ್ಲಿ ಅಪ್‌ಲೋಡ್ ಮಾಡಲಾಗುವುದು ಎಂದು ವರದಿ ತಿಳಿಸಿದೆ.* ಇನ್ನು ಮುಂಬರುವ ಜನಗಣತಿಯ ಬಗ್ಗೆಯೂ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಕೋವಿಡ್-19 ಸಾಂಕ್ರಾಮಿಕದ ಕಾರಣದಿಂದ ತಡೆಹಿಡಿಯಲಾಗಿದ್ದ ರಾಷ್ಟ್ರೀಯ ಜನಗಣತಿಯಲ್ಲಿ, ಸುಧಾರಿತ ಜಿಯೋಸ್ಪೇಷಿಯಲ್ ತಂತ್ರಜ್ಞಾನದ ಬಳಕೆ ಮಾಡಲಾಗುತ್ತದೆ. * ಅತಿ ದೊಡ್ಡ ಗಣತಿ ಕಾರ್ಯವನ್ನು ಸುಗಮವಾಗಿ ನಡೆಸಲು ಹಲವಾರು ಹೊಸ ಉಪಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.