Job Description: * ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ಸಚಿವ ಶ್ರೀ ಭೂಪೇಂದರ್ ಯಾದವ್ ಅವರು ಇಂದು ಈಜಿಪ್ಟ್ ನ ಶರ್ಮ್ ಎಲ್-ಶೇಖ್ ನಲ್ಲಿ ಯು.ಎನ್.ಎಫ್.ಸಿಸಿಸಿ (ಕಾಪ್ 27) ನ ಪಕ್ಷಕಾರರ ಸಮ್ಮೇಳನದ 27 ನೇ ಅಧಿವೇಶನದಲ್ಲಿ ಭಾರತೀಯ ಪೆವಿಲಿಯನ್ ಉದ್ಘಾಟಿಸಿದರು. 2022 ರ ನವೆಂಬರ್ 6 ರಿಂದ 18 ರವರೆಗೆ ಸಮಾವೇಶ (ಕಾಪ್ 27) ನಡೆಯಲಿದೆ.* " ಭಾರತೀಯ ಪೆವಿಲಿಯನ್ ಕಾಪ್ ಅವಧಿಯುದ್ದಕ್ಕೂ, ಸರಳ ಜೀವನಶೈಲಿ ಮತ್ತು ಪ್ರಕೃತಿಯಲ್ಲಿ ಸುಸ್ಥಿರವಾಗಿರುವ ವೈಯಕ್ತಿಕ ರೂಢಿಗಳು ಭೂತಾಯಿಯನ್ನು ರಕ್ಷಿಸಲು ಸಹಾಯ ಮಾಡುತ್ತದೆ ಎಂದು ಪ್ರತಿನಿಧಿಗಳಿಗೆ ನೆನಪಿಸುತ್ತಲೇ ಇರುತ್ತದೆ ಎಂಬ ವಿಶ್ವಾಸ ನನಗಿದೆ" ಎಂದು ಕೇಂದ್ರ ಪರಿಸರ ಸಚಿವ ಶ್ರೀ ಯಾದವ್ ಹೇಳಿದರು.* "ಹವಾಮಾನ ಹಣಕಾಸು ಸಂಬಂಧಿತ ಚರ್ಚೆಗಳಲ್ಲಿ ಗಣನೀಯ ಪ್ರಗತಿಯನ್ನು ಭಾರತ ಎದುರು ನೋಡುತ್ತಿದೆ. ಹೊಸ ತಂತ್ರಜ್ಞಾನಗಳ ಪರಿಚಯ ಮತ್ತು ತಂತ್ರಜ್ಞಾನ ವರ್ಗಾವಣೆಗೆ ಅನುಕೂಲವಾಗುವಂತೆ ಹೊಸ ಸಹಯೋಗಗಳನ್ನು ಸಹ ನಾವು ಎದುರು ನೋಡುತ್ತಿದ್ದೇವೆ" ಎಂದು ಶ್ರೀ ಯಾದವ್ ಹೇಳಿದರು.* "ಲೈಫ್ ಅಭಿಯಾನ ಈ ಭೂಮಿಯ ರಕ್ಷಣೆಗಾಗಿ ಜನರ ಶಕ್ತಿಯನ್ನು ಒಗ್ಗೂಡಿಸುತ್ತದೆ ಮತ್ತು ಅದನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಲು ಅವರಿಗೆ ಕಲಿಸುತ್ತದೆ. ಲೈಫ್ ಅಭಿಯಾನ ಹವಾಮಾನ ಬದಲಾವಣೆಯ ವಿರುದ್ಧದ ಹೋರಾಟವನ್ನು ಪ್ರಜಾಸತ್ತಾತ್ಮಕಗೊಳಿಸುತ್ತದೆ, ಇದರಲ್ಲಿ ಪ್ರತಿಯೊಬ್ಬರೂ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಕೊಡುಗೆ ನೀಡಬಹುದು.