Job Description: * ಚಂದ್ರಯಾನ ಮತ್ತು ಮಂಗಳಯಾನ ನಂತರ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಜಪಾನ್ ಸಹಯೋಗದೊಂದಿಗೆ ಚಂದ್ರನ ಶಾಶ್ವತ ಕಪ್ಪು ಭಾಗವನ್ನು ಸಂಶೋಧಿಸಲು ಚಿಂತನೆ ನಡೆಸಿದೆ. * "ಆಕಾಶ್ ತತ್ವಾ" ಸಮ್ಮೇಳನದಲ್ಲಿ ಅಹಮದಾಬಾದ್ ಮೂಲದ ಭೌತ ವಿಜ್ಞಾನ ಸಂಶೋಧನಾ ಪ್ರಯೋಗಾಲಯದ ನಿರ್ದೇಶಕ ಅನಿಲ್ ಭಾರದ್ವಾಜ್ ಅವರು ಇಸ್ರೋ ದ ಮುಂದಿನ ಯೋಜನೆಗಳ ಕುರಿತು ಚರ್ಚಿಸಿದರು, ಇಸ್ರೋದಿಂದ ಮಂಗಳ ಗ್ರಹಕ್ಕೆ ಮತ್ತೆ ಉಪಗ್ರಹ ಕಳುಹಿಸುವ ಯೋಜನೆ ಇದೆ ಎಂದು ಹೇಳಿದರು. * ಸೂರ್ಯನಲ್ಲಿಗೆ ಕಳುಹಿಸಬೇಕಾಗಿರುವ 400 ಕೆ.ಜಿ ತೂಕದ ಉಪಗ್ರಹ "ಆದಿತ್ಯ ಎಲ್- 1" ಇದು ಭೂಮಿಯಿಂದ 15 ಲಕ್ಷ ಕಿ.ಮೀ ದೂರದಲ್ಲಿ ಸೂರ್ಯನ ಕಕ್ಷೆ ಸುತ್ತ ಸುತ್ತುತ್ತದೆ. * ಲ್ಯಾಂಗರ್ಜ್ ಪಾಯಿಂಟ್ ಎಲ್ - 1 ಎಂಬ ಬಿಂದುವಿನ ಮೂಲಕ ಸೂರ್ಯನ ಅಧ್ಯಯನ ನಡೆಸಲಿದೆ ಎಂದು ಹೇಳಿದರು.