Job Description: * ಆರ್ ಬಿಐ ಬಿಡುಗಡೆ ಮಾಡಿರುವ ಡಿಜಿಟಲ್ ರೂಪಾಯಿ ಬಳಸಿ ಮೊದಲ ದಿನವಾದ ಮಂಗಳವಾರ ವಿವಿಧ ಬ್ಯಾಂಕ್‌ಗಳು ಒಟ್ಟಾರೆ 275 ಕೋಟಿ ರೂ ಮೊತ್ತದ ವ್ಯವಹಾರಗಳನ್ನು ನಡೆಸಿವೆ. ಈ ಮೂಲಕ ದೇಶದಲ್ಲಿ ಡಿಜಿಟಲ್ ಕರೆನ್ಸಿ ವಹಿವಾಟು ಆರಂಭಗೊಂಡಿದೆ.* ಆರ್‌ಬಿಐ, ಡಿಜಿಟಲ್ ರುಪಿಯನ್ನು ಪ್ರಾಯೋಗಿಕ ವಾಗಿ ಮೊದಲ ಹಂತದಲ್ಲಿ 8 ದೊಡ್ಡ ಹಣಕಾಸು ಸಂಸ್ಥೆಗಳಿಗೆ ಬಿಡುಗಡೆ ಮಾಡಿದೆ,ಅದರನ್ವಯ ಮೊದಲ ದಿನವಾದ ಮಂಗಳವಾರ ಎಸ್ ಬಿಐ, ಐಸಿಐಸಿಐ, ಎಚ್‌ ಡಿಎಫ್‌ಸಿ ಸೇರಿದಂತೆ ಹಲವು ಬ್ಯಾಂಕ್‌ಗಳು 48 ಸೆಕ್ಯುರಿಟಿ ಜಲ್ ಗಳ ಮೂಲಕ 175 ಕೋಟಿ ರೂ. ವಹಿವಾಟು ನಡೆದಿದೆ.* ಡಿಜಿಟಲ್ ರುಪಿ ಎನ್ನುವುದು, ರುಪಾಯಿ ಮತ್ತು ನಾಣ್ಯಗಳ ಹಾಗೆ ಆರ್ ಬಿಐನ ಭದ್ರತಾ ಖಾತರಿ ಇರುವ ಹಣ, ಆದರೆ ಇದು ಅಟಲ್ ಸ್ವರೂಪದಲ್ಲಿ ಇರುತ್ತದೆ. * ಮೊದಲ ಹಂತದಲ್ಲಿ ದೊಡ್ಡ ಹಣಕಾಸು ಸಂಸ್ಥೆಗಳಿಗೆ ಮಾತ್ರ ಇದರ ಬಳಕೆಗೆ ಅವಕಾಶ ನೀಡಲಾಗಿದ್ದು, ಇದರ ಸಾಧಕ ಬಾಧಕ ಆಧರಿಸಿ ಇನ್ನೊಂದು ತಿಂಗಳಗೊಳಗೆ ಇದನ್ನು ಚಿಲ್ಲರೆ ಬಳಕೆದಾರರಿಗೂ ಬಿಡುಗಡೆ ಮಾಡಲು ಆರ್‌ಬಿಐ ನಿರ್ಧರಿಸಿದೆ.