Job Description: * ರಷ್ಯಾ ಈಗ ಭಾರತದ ಅತಿ ದೊಡ್ಡ ಕಚ್ಚಾ ತೈಲ ಪೂರೈಕೆದಾರ ದೇಶವಾಗಿ ಹೊರಹೊಮ್ಮಿದೆ, ಅಕ್ಟೋಬರ್‌ನಲ್ಲಿ ಭಾರತಕ್ಕೆ ಪ್ರತಿದಿನ 9,46,000 ಬ್ಯಾರೆಲ್ ತೈಲವನ್ನು ರಷ್ಯಾ ರಫ್ತು ಮಾಡಿದೆ.* ಸೆಪ್ಟೆಂಬರ್‌ನಲ್ಲಿ ಪ್ರತಿ ದಿನ ರಷ್ಯಾ 8,76,000 ಬ್ಯಾರೆಲ್‌ ತೈಲವನ್ನು ರಫ್ತು ಮಾಡಿತ್ತು Se.20.5. ಆಮದು ಸೌದಿ ಅರೇಬಿಯಾ ಶೇ.16 ರಷ್ಟು ಪಾಲನು ಹೊಂದಿದೆ. * ಈ ಮೂಲಕ ಮೊದಲ ಬಾರಿಗೆ ರಷ್ಯಾ ಪ್ರಥಮ ಸ್ಥಾನ ಪಡೆದಿದೆ, ಸೆಪ್ಟೆಂಬರ್‌ಗೆ ಹೋಲಿಸಿದರೆ ರಷ್ಯಾದಿಂದ ಆಮದಾಗುವ ರಫ್ತು ಪ್ರಮಾಣ ಶೇ.5 ರಷ್ಟು ಹೆಚ್ಚಳವಾಗಿದೆ.* ಅಕ್ಟೋಬರ್‌ನಲ್ಲಿ ಸೌದಿ ಅರೇಬಿಯಾದಿಂದ ಭಾರತಕ್ಕೆ 7,06,000 ಬಿಪಿಡಿ (ಬ್ಯಾರೆಲ್ ಪರ್ ಡೇ) ಕಚ್ಚಾ ತೈಲ ರಫ್ತು ಆಗಿ ದ್ದರೆ ಸೆಪ್ಟೆಂಬರ್‌ನಲ್ಲಿ 8,07,000 ಬಿಪಿಡಿ ರಫ್ತು ಆಗಿತ್ತು. * ಉಕ್ರೇನ್ ಯುದ್ಧದ ಬಳಿಕ ಭಾರತ ಅಲ್ಲದೇ ಚೀನಾ, ಟರ್ಕಿ ಹೆಚ್ಚಿನ ಪ್ರಮಾಣದಲ್ಲಿ ರಷ್ಯಾದಿಂದ ತೈಲವನ್ನು ಆಮದು ಮಾಡುತ್ತಿವೆ.