Job Description: * ಭಾರತೀಯ ಸಂಶೋಧನಾ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ಯು ಇದೇ ಮೊದಲ ಬಾರಿಗೆ ಎಡಿ-1 ಎನ್ನುವ ದೀರ್ಘವ್ಯಾಪ್ತಿಯ ಪ್ರತಿರೋಧಕ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷೆಗೊಳಪಡಿಸಿದೆ.* ಭೂಮಿಯ ಮೇಲೆ ಹಾಗೂ ಬಾಹ್ಯ ವಾತಾವರಣ-ಈ ಎರಡರಲ್ಲೂ ಎಡಿ-1 ಕ್ಷಿಪಣಿಯು ಯುದ್ಧ ವಿಮಾನಗಳು ಹಾಗೂ ಮಾರಕಾಸ್ತ್ರಗಳನ್ನು ಹೊಡೆದುರುಳಿಸಬಲ್ಲ ಸಾಮರ್ಥ್ಯ ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.* ಕೆಲವೇ ದೇಶಗಳಲ್ಲಿ ಲಭ್ಯವಿರುವ ಅತ್ಯಾಧುನಿಕ ತಂತ್ರಜ್ಞಾನದಿಂದ ರೂಪಿಸಿರುವ ಈ ಕ್ಷಿಪಣಿಯು ವಿಶಿಷ್ಟ ರೀತಿಯ ಪ್ರತಿರೋಧಕ ಸಾಧನವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಹೇಳಿದ್ದಾರೆ.* ಒಡಿಶಾದ ಕರಾವಳಿಯಾಚೆ ಇರುವ ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಎಡಿ-1 ಕ್ಷಿಪಣಿಯನ್ನು ಪರೀಕ್ಷೆಗೊಳಪಡಿಸಲಾಗಿದೆ. * ವಿವಿಧರೀತಿಯಭೌಗೋಳಿಕ ಪ್ರದೇಶಗಳಲ್ಲಿರುವ ಎಲ್ಲಾ ಬಿಎಂಡಿ ವ್ಯವಸ್ಥೆಗಳನ್ನೂ ಈ ಕ್ಷಿಪಣಿ ಪರೀಕ್ಷೆಗೆ ಬಳಸಿಕೊಳ್ಳಲಾಯಿತು, ಭಾರತ ಈಗ ಎರಡು ಹಂತಗಳಲ್ಲಿ ಬಿಎಂಡಿ ಕಾರ್ಯಕ್ರಮವನ್ನು ಕಾರ್ಯಗತಗೊಳಿಸುತ್ತಿದೆ, ಮೊದಲ ಹಂತ ಈಗಾಗಲೇ ಪೂರ್ಣಗೊಂಡಿದ್ದು ಎರಡನೇ ಹಂತ ಜಾರಿಯಲ್ಲಿದೆ.