Job Description: * ನವೆಂಬರ್ 3 ರಂದು ನಡೆದ ಏಷ್ಯನ್ ಚೆಸ್ ಚಾಂಪಿಯನ್ ಶಿಪ್ ನಲ್ಲಿ ಭಾರತದ ಗ್ರ್ಯಾಂಡ್ ಮಾಸ್ಟರ್ ಆರ್.ಪ್ರಜ್ಞಾನಂದ ಹಾಗೂ ಪಿ.ವಿ.ನಂದಿದಾ ಇವರುಗಳು ಕ್ರಮವಾಗಿ ಓಪನ್ ಹಾಗೂ ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್ ಆದರು.* ಪ್ರಗ್ನಾನಂದ ಅವರು ಒಂಬತ್ತನೇ ಹಾಗೂ ಕೊನೆಯ ಸುತ್ತಿನಲ್ಲಿ ಭಾರತದವರೇ ಆದ ಬಿ.ಅಧಿಬನ್‌ ಅವರೊಂದಿಗೆ 63 ನಡೆಗಳಲ್ಲಿ ಡ್ರಾ ಮಾಡಿಕೊಂಡರು, ಈ ಮೂಲಕ ಒಟ್ಟು ಏಳು ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನ ತಮ್ಮದಾಗಿಸಿಕೊಂಡರು.* ಮಹಿಳೆಯರ ವಿಭಾಗದಲ್ಲಿ ನಂದಿದಾ ಅವರು ಒಂಬತ್ತನೇ ಸುತ್ತಿನಲ್ಲಿ ದಿವ್ಯಾ ದೇಶಮುಖ್‌ ಎದುರು ಡ್ರಾ ಮಾಡಿಕೊಂಡು ಒಟ್ಟು 7.5 ಪಾಯಿಂಟ್ಸ್‌ಗಳೊಂದಿಗೆ ಅಗ್ರಸ್ಥಾನದ‌ಲ್ಲಿ ಕಾಣಿಸಿಕೊಂಡರು.* ಕಳೆದ ವರ್ಷ 2021ರ ಚೆಸ್ ವಿಶ್ವಕಪ್ನಲ್ಲಿ ಪ್ರಗ್ನಾನಂದ ಅವರು 90 ನೇ ಶ್ರೇಯಾಂಕವಾಗಿ ಪ್ರವೇಶಿಸಿದ್ದರು, 2 ನೇ ಸುತ್ತಿನಲ್ಲಿ GM ಗೇಬ್ರಿಯಲ್ ಸರ್ಗಿಸ್ಸಿಯನ್ ಅವರನ್ನು 2-0 ಅಂತರದಲ್ಲಿ ಸೋಲಿಸಿದ ಸಾಧನೆ ಕೂಡ ಮಾಡಿದ್ದರು, 3 ನೇ ಸುತ್ತಿನಲ್ಲಿ ರ್ಯಾಪಿಡ್ ಟೈಬ್ರೇಕ್ಗಳಲ್ಲಿ GM ಮೈಕಾಲ್ ಕ್ರಾಸೆಂಕೋವ್ ಅವರನ್ನು ಸೋಲಿಸಿದ ನಂತರ 4 ನೇ ಸುತ್ತಿಗೆ ಮುನ್ನಡೆದರು.