Job Description: * ಭಾರತದಲ್ಲಿ ಕಳೆದ 8 ವರ್ಷಗಳಲ್ಲಿ 10 ಶಾಲೆಗಳ ಪೈಕಿ 7 ಶಾಲೆಗಳು ಖಾಸಗಿ ಶಾಲೆಗಳಾಗಿವೆ ಎಂದು ಯುನೆಸ್ಕೊ ತನ್ನ ಎಜುಕೇಷನ್ ಮೊನಿಟರಿಂಗ್ ರಿಪೋರ್ಟ್ 2022 ರಲ್ಲಿ ಹೇಳಿದೆ. * ದಕ್ಷಿಣ ಏಷ್ಯಾ ದೇಶಗಳಲ್ಲಿ ಯುನೆಸ್ಕೊವು ಸಮೀಕ್ಷೆ ನಡೆಸಿ ವರದಿ ತಯಾರಿಸಿದೆ ಹಾಗೂ ಪೋಷಕರ ನಿರೀಕ್ಷೆ ಮಟ್ಟಿಗೆ ಮಕ್ಕಳ ಶಿಕ್ಷಣವು ಖಾಸಗಿ ಶಾಲೆಯಲ್ಲಿ ದೊರೆಯುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ. * ಸಮೀಕ್ಷೆಯಲ್ಲಿ ಪೋಷಕರು, ಶಿಕ್ಷಣವು ಸರ್ಕಾರಿ ಶಾಲೆಗಿಂತ ಖಾಸಗಿ ಶಾಲೆಯಲ್ಲಿ ಹೆಚ್ಚು ಗುಣಮಟ್ಟದ್ದಾಗಿರುತ್ತದೆ ಎಂದು ಶೇಕಡಾ 73 ರಷ್ಟು ಪೋಷಕರು ತಿಳಿಸಿದ್ದಾರೆ. * ಇನ್ನುಳಿದ 12 ಪ್ರತಿಶತ ಪೋಷಕರು ತಮ್ಮ ಮಕ್ಕಳಿಗಾಗಿ ಇಂಗ್ಲೀಷ ಮಾಧ್ಯಮ ಶಿಕ್ಷಣ ಬೇಕು ಎನ್ನುವವರಿದ್ದಾರೆ ಎಂದು ವರದಿ ಹೇಳುತ್ತದೆ. ಹಾಗೂ ಕೊನೆಯ ಶೇಕಡಾ 10 ರಷ್ಟು ಪೋಷಕರು ತಮ್ಮ ಮಕ್ಕಳಿಗಾಗಿ ಸರ್ಕಾರಿ ಶಾಲೆಯ ಲಭ್ಯತೆ ಇಲ್ಲ ಎಂದು ಹೇಳಿದ್ದಾರೆ.