Job Description: * ಭಾರತೀಯ ವಾಯುಪಡೆಗಾಗಿ ಯುರೋಪ್ ನ ಏರ್ ಬಸ್ ಸಂಸ್ಥೆಯ ಸಿ-295 ವಿಮಾನಗಳನ್ನು ತಯಾರಿಸುವ ಘಟಕಕ್ಕೆ ಪ್ರಧಾನಿ ಮೋದಿಯವರಿಂದ ಶಂಕುಸ್ಥಾಪನೆ ಮಾಡಲಾಯಿತು. * ಟಾಟಾ-ಏರ್‌ಬಸ್ ಕನ್ಸೋರ್ಟಿಯಂ ಸ್ಥಾಪಿಸುತ್ತಿದೆ, ಇದು ಸ್ವಾವಲಂಬಿ ಭಾರತ (ಆತ್ಮನಿರ್ಭರ ಭಾರತ) ಕಡೆಗೆ ಮತ್ತೊಂದು ಹೆಜ್ಜೆಯಾಗಿದೆ. * ಭಾರತೀಯ ವಾಯುಪಡೆಯನ್ನ (ಐಎಎಫ್) ಆಧುನೀಕರಿಸುವ ಉದ್ದೇಶದಿಂದ ಇಲ್ಲಿ ಕಂಪನಿಯನ್ನು ಸ್ಥಾಪಿಸಲಾಗುತ್ತಿದೆ, ಯೋಜನೆಗೆ ಅಂದಾಜು 21,935 ಕೋಟಿ ಬಂಡವಾಳ ಹೂಡಲಾಗುತ್ತಿದೆ. ಸಿ-295 ವಿಮಾನಗಳನ್ನು ಇಲ್ಲಿ ತಯಾರಿಸಲಾಗುತ್ತದೆ.* ಸಿ-295 ವಿಮಾನಕ್ಕಾಗಿ ಭಾರತ ಸರ್ಕಾರವು ಕಳೆದ ವರ್ಷ ಏರ್‌ಬಸ್ ಡಿಫೆನ್ಸ್ ಮತ್ತು ಸ್ಪೇಸ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. * 21,000 ಕೋಟಿ ವೆಚ್ಚದಲ್ಲಿ 56 ವಿಮಾನಗಳನ್ನು ಖರೀದಿಸಲು ನಿರ್ಧರಿಸಿದೆ, ಇವುಗಳಲ್ಲಿ 16 ವಿಮಾನಗಳು ಸ್ಪೇನ್‌ನಿಂದ ಬರಲಿವೆ. ಉಳಿದ 40 ವಿಮಾನಗಳನ್ನು ವಡೋದರಾದಲ್ಲಿ ಸ್ಥಾಪಿಸಲಾಗುತ್ತಿರುವ ಕಂಪನಿಯಲ್ಲಿ ತಯಾರಿಸಲಾಗುವುದು.* ಇದೆ ಮೊದಲಬಾರಿಗೆ C-295 ವಿಮಾನವನ್ನು ಯುರೋಪಿನ ಹೊರಗೆ ತಯಾರಿಸುತ್ತಿರುವುದು.* ರಕ್ಷಣಾ ಸಚಿವ ರಾಜನಾಥ್ ಸಿಂಗ್ , ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಎಂ ಸಿಂಧಿಯಾ ಮತ್ತು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರಭಾಯಿ ಪಟೇಲ್ ಕೂಡ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.* C-295 ಅವ್ರೋ ಮತ್ತು AN-32 ಸಾರಿಗೆ ವಿಮಾನಗಳ ಕಾರ್ಯಕ್ಷಮತೆಯನ್ನು ಮೀರಿದೆ ಮತ್ತು ಇದು ಅತ್ಯಂತ ಇಂಧನ ದಕ್ಷತೆಯನ್ನು ಹೊಂದಿದೆ ಎಂದು IAF ಉಪಾಧ್ಯಕ್ಷ ಏರ್ ಮಾರ್ಷಲ್ ಸಂದೀಪ್ ಸಿಂಗ್ ಹೇಳಿದ್ದಾರೆ.