Job Description: * ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು 2035 ರ ವೇಳೆಗೆ ಸ್ವಂತ ಬಾಹ್ಯಾಕಾಶ ನಿಲ್ದಾಣ ನಿರ್ಮಿಸುವ ಗುರಿ ಹೊಂದಿದೆ, ಇದಕ್ಕಾಗಿ ಅಗತ್ಯವಿರುವ ರಾಕೆಟ್ ನಿರ್ಮಾಣಕ್ಕಾಗಿ ಉದ್ಯಮಗಳ ಸಹಕಾರ ಕೋರಿದೆ. * ಅಕ್ಟೋಬರ್ 30 ರಂದು ಇಸ್ರೋ ದ ಅಧ್ಯಕ್ಷ ಎಸ್ ಸೋಮನಾಥ್ ರವರು " ರಾಕೆಟ್ ವಿನ್ಯಾಸ ಕಾರ್ಯದಲ್ಲಿ ಇಸ್ರೋ ತೊಡಗಿಕೊಂಡಿದೆ, ಇದರ ಅಭಿವೃದ್ಧಿಗಾಗಿ ಉದ್ಯಮಗಳು ನಮ್ಮೊಂದಿಗೆ ಕೈಜೋಡಿಸಬೇಕು" ಎಂದು ಮನವಿ ಮಾಡಿಕೊಂಡಿದ್ದಾರೆ. * ರಾಕೆಟ್ ನಿರ್ಮಾಣ ಕಾರ್ಯದಲ್ಲಿ ಉದ್ಯಮಗಳು ಸಹಭಾಗಿತ್ವ ಪ್ರೋತ್ಸಾಹಿಸುವದು ನಮ್ಮ ಉದ್ದೇಶ, ರಾಕೆಟ್ ಅಭಿವೃದ್ಧಿ ತಗಲುವ ಸಂಪೂರ್ಣ ವೆಚ್ಚವನ್ನು ನಾವೇ ಭರಿಸುವದು ಅಸಾಧ್ಯ ಹಾಗಾಗಿ ಉದ್ಯಮಗಳು ಹೂಡಿಕೆ ಮಾಡುವದು ಒಳ್ಳೆಯದು ಎಂದು ಸೋಮನಾಥ್ ಹೇಳಿದರು.* ಭೂ ಸ್ಥಿರ ಕಕ್ಷೆಗೆ 10 ಟನ್ ತೂಕದ ಅಥವಾ ಕಡಿಮೆ ಎತ್ತರದ ಕಕ್ಷೆಗೆ 20 ಟನ್ ತೂಕದ ರಾಕೆಟ್ ಗಳನ್ನು ನಿರ್ಮಿಸುವದು ನಮ್ಮ ಗುರಿ ಎಂದು ಇಸ್ರೋ ಅಧ್ಯಕ್ಷ ಸೋಮನಾಥ್ ಹೇಳಿದರು.