Job Description: * ಟೆಸ್ಲಾ ಕಂಪನಿಯ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಇಲಾನ್ ಮಸ್ಕ್ ರವರು ಟ್ವಿಟ್ ಕಂಪನಿಯನ್ನು ಖರೀದಿಸಿದ್ದಾರೆ, "ಹಕ್ಕಿ ಸ್ವತಂತ್ರವಾಗಿದೆ" ಎಂದು ಅಕ್ಟೋಬರ್ 28 ರಂದು ಟ್ವಿಟ್ ಮಾಡಿದ್ದಾರೆ. * ಟ್ವಿಟ್ ಕಂಪನಿಯನ್ನು 3.60 ಲಕ್ಷ ಕೋಟಿ ಮೊತ್ತಕ್ಕೆ ಖರೀದಿಸಿದ್ದಾರೆ, ಗುರುವಾರ ಅಕ್ಟೋಬರ್ 27 ರಂದು ಟ್ವಿಟರ್ ನ್ನು ಮಸ್ಕ್ ರವರು ಖರೀದಿಸಿದ್ದಾರೆ. * ಟ್ವಿಟರ್ ಖರೀದಿಸಿದ ನಂತರವೇ ಉನ್ನತ ಹುದ್ದೆಯಲ್ಲಿದ್ದವರನ್ನು ವಜಾ ಮಾಡಿದ್ದಾರೆ, ಟ್ವಿಟರ್ ನ ಸಿಇಒ ಆಗಿದ್ದ ಭಾರತ ಮೂಲದ ಪರಾಗ್ ಅಗ್ರವಾಲ್, ಕಾನೂನು ವ್ಯವಹಾರ ಮತ್ತು ನೀತಿ ವಿಭಾಗದ ಮುಖ್ಯಸ್ಥೆ ವಿಜಯಾ ಗದ್ದೆ, ಮುಖ್ಯ ಹಣಕಾಸು ಅಧಿಕಾರಿ ನೆಡ್ ಸೇಗಲ್ ಹಾಗು ಜನರಲ್ ಕಾನ್ಸುಲ್ ಸೀನ್ ಎಡ್ಜೆಟ್ ಅವರನ್ನು ವಜಾ ಮಾಡಿದ್ದಾರೆ.* ಪರಾಗ್ ರವರು 2021 ನವೆಂಬರ್ ನಲ್ಲಿ ಟ್ವಿಟ್ ನ ಸಿಇಒ ಆಗಿ ನೇಮಕ ಆಗಿದ್ದರು.* ಎಲೋನ್ ಮಸ್ಕ್ ಈ ವರ್ಷದ ಏಪ್ರಿಲ್ 13 ರಂದು ಟ್ವಿಟರ್ ಖರೀದಿಸಿರುವುದಾಗಿ ಘೋಷಿಸಿದ್ದರು, ಪ್ರತಿ ಷೇರಿಗೆ $54.2 ದರದಲ್ಲಿ $44 ಶತಕೋಟಿಗೆ ಸೋಶಿಯಲ್ ಮೀಡಿಯಾ ಪ್ಲಾಟ್ಫಾರಂನ್ನು ಖರೀದಿಸಲು ಅವರು ಪ್ರಸ್ತಾಪಿಸಿದ್ದರು, ಆದರೆ ನಂತರ ಸ್ಪ್ಯಾಮ್ ಮತ್ತು ನಕಲಿ ಖಾತೆಗಳ ಕಾರಣ, ಅವರು ಆ ಒಪ್ಪಂದವನ್ನು ಸ್ಥಗಿತಗೊಳಿಸಿದ್ದರು.* ಜುಲೈ 8 ರಂದು, ಮಸ್ಕ್ ಒಪ್ಪಂದವನ್ನು ಮುರಿಯಲು ನಿರ್ಧರಿಸಿದರು, ಇದರ ವಿರುದ್ಧ ಟ್ವಿಟರ್ ವಿವಾದದಲ್ಲಿತ್ತು, ಅಕ್ಟೋಬರ್ ಆರಂಭದಲ್ಲಿ ಮಸ್ಕ್ ತನ್ನ ನಿಲುವನ್ನು ಬದಲಿಸಿ ಒಪ್ಪಂದವನ್ನು ಮತ್ತೆ ಪೂರ್ಣಗೊಳಿಸಲು ಒಪ್ಪಿಕೊಂಡರು.* ಡೆಲವೇರ್ ನ್ಯಾಯಾಲಯವು ಅಕ್ಟೋಬರ್ 28 ರೊಳಗೆ ಒಪ್ಪಂದವನ್ನು ಪೂರ್ಣಗೊಳಿಸಲು ಆದೇಶಿಸಿತು.* ಎಲೋನ್ ಮಸ್ಕ್ ಒಂದು ದಿನ ಮುಂಚಿತವಾಗಿ ಟ್ವಿಟ್ಟರ್ ಕಚೇರಿಗೆ ತಲುಪುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದರು.