Job Description: * ವಿಶ್ವದ ಶ್ರೇಷ್ಠ ಆಟಗಾರನಿಗೆ ನೀಡುವ ಪ್ರತಿಷ್ಠಿತ ಬ್ಯಾಲನ್ ಡಿ ಓರ್ ಪ್ರಶಸ್ತಿಗೆ ಫ್ರಾನ್ಸ್ ನ ಕರೀಂ ಬೆಂಜೆಮಾ ರವರು ಭಾಜನರಾಗಿದ್ದಾರೆ. * ಮಹಿಳೆಯರ ವಿಭಾಗದಲ್ಲಿ ಸ್ಪೇನ್ ನ ಅಲೆಕ್ಸಿಯಾ ಪ್ಲ್ಯೂಟೆಯಸ್ಸತತ ಎರಡನೇ ಬಾರಿ ಈ ಪ್ರಶಸ್ತಿ ಪಡೆದುಕೊಂಡರು ಅಕ್ಟೋಬರ್ 17 ರಂದು ನಡೆದ ವರ್ಣರಂಜಿತ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು. * ಜಿನೇಡಿನ್ ಜಿಡಾನ್ ರವರ ನಂತರ ಈ ಗೌರವಕ್ಕೆ ಬೆಂಜೆನ್ ರವರು ಪಾತ್ರರಾಗಿದ್ದಾರೆ 1998 ರಲ್ಲಿ ಜಿಡಾನ್ ರವರಿಗೆ ಈ ಪ್ರಶಸ್ತಿ ದೊರೆಕಿತ್ತು. * ಕಳೆದ ವರ್ಷ ರಿಯಲ್ ಮ್ಯಾಡ್ರಿಡ್ ಕ್ಲಬ್ ಪರ ತೋರಿದ ಉತ್ತಮ ಪ್ರದರ್ಶನದಿಂದ ಬೆಂಜೆನ್ ರವರಿಗೆ ಈ ಪ್ರಶಸ್ತಿ ದೊರೆಕಿದೆ, 46 ಪಂದ್ಯಗಳಲ್ಲಿ 44 ಗೋಲುಗಳನ್ನು ಗಳಿಸಿದ್ದರು. * ಸೆನೆಗಲ್ ನ ಸಾದಿಯೋ ಮಾನೆ ಮತ್ತು ಬೆಲ್ಜಿಯಂ ನ ಕೆವಿನ್ ಡಿ ಬ್ರೆಯ್ನ್ ರವರನ್ನು ಸೋಲಿಸಿ ಬೆಂಜೆನ್ ರವರು ಈ ಗೌರವಕ್ಕೆ ಭಾಜನರಾಗಿದ್ದಾರೆ, 2021 ರಲ್ಲಿ ಈ ಗೌರವ ಅರ್ಜೆಂಟೀನಾದ ಲಯೋನಲ್ ಮೆಸ್ಸಿ ಗೆ ದೊರೆಕಿತ್ತು.* ಬಾರ್ಸಿಲೋನಾ ಕ್ಲಬ್ ಗೆ ಆಡುವ ಅಲೆಕ್ಸಿಯಾ ಗೆ ಸತತ ಎರಡನೇ ಬಾರಿ ಈ ಪ್ರಶಸ್ತಿ ದೊರೆಕಿದೆ. * ಪುರುಷರ ವಿಭಾಗದಲ್ಲಿ 1956 ರಿಂದ ಹಾಗು ಮಹಿಳೆಯರ ವಿಭಾಗದಲ್ಲಿ 2018 ರಿಂದ ಬ್ಯಾಲನ್ ಡಿ ಓ ಆರ್ ಪ್ರಶಸ್ತಿ ಕೊಡಲಾಗುತ್ತಿದೆ.