Job Description: * ಸ್ಥಿರ ದೂರವಾಣಿ ಸೇವೆ ಒದಗಿಸುವ ಕಂಪನಿಗಳ ಸಾಲಿನಲ್ಲಿ ಭಾರತದಲ್ಲಿ ಜಿಯೋ ಮೊದಲ ಸ್ಥಾನದಲ್ಲಿದೆ, ಬಿಎಸ್ಎನ್ಎಲ್ ಎರಡನೇ ಸ್ಥಾನದಲ್ಲಿದೆ.* ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಅಕ್ಟೋಬರ್ 18 ರಂದು ನೀಡಿರುವ ಅಂಕಿ ಅಂಶಗಳ ವರದಿ ಪ್ರಕಾರ ಇದು ತಿಳಿದು ಬಂದಿದೆ.* ಅಗಸ್ಟ್ ನಲ್ಲಿ ಜಿಯೋ 73.52 ಲಕ್ಷ ದೂರವಾಣಿ ಸಂಪರ್ಕಗಳನ್ನು ಹಾಗು ಬಿಎಸ್ಎನ್ಎಲ್ 71.31 ಲಕ್ಷ ಸಂಪರ್ಕಗಳನ್ನು ಹೊಂದಿದ್ದವು ಎಂದು ಟ್ರಾಯ್ ಹೇಳಿದೆ. * ಬಿಎಸ್ಎನ್ಎಲ್ ಕಂಪನಿಯು 22 ವರ್ಷಗಳಿಂದ ಸೇವೆ ಸಲ್ಲಿಸುತ್ತಿದೆ, ಜಿಯೋ 3 ವರ್ಷಗಳಿಂದ ಸೇವೆ ಸಲ್ಲಿಸುತ್ತಿದೆ, ಅಗಸ್ಟ್ ನಲ್ಲಿ ಜಿಯೋ ಹೊಸದಾಗಿ 2.62 ಲಕ್ಷ ಚಂದಾದಾರರನ್ನು ಹಾಗೂ ಬಿಎಸ್ಎನ್ಎಲ್ 15,734 ಚಂದಾದಾರರನ್ನು ಕಳೆದುಕೊಂಡಿದೆ