Job Description: * ಕಸಬಾ ಕುರುಬರಳ್ಳಿ ಗ್ರಾಮದ ದಲಿತ ಯುವತಿ ಡಾ. ಕೆ ಪಿ ಅಶ್ವಿನಿ ಯವರು ವಿಶ್ವ ಸಂಸ್ಥೆಯ ಮಾನವ ಹಕ್ಕು ಮಂಡಳಿಗೆ ಸ್ವಂತಂತ್ರ ತಜ್ಞೆಯಾಗಿ ನೇಮಕವಾಗಿದ್ದಾರೆ. * ಅಕ್ಟೋಬರ್ 7 ರಂದು ಜಿನೀವದಲ್ಲಿ ಮುಕ್ತಾಯವಾದ ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿಯ ಅಧಿವೇಶನದಲ್ಲಿ ಅಶ್ವಿನಿ ಅವರ ಹೆಸರನ್ನು ಅಧಿಕೃತವಾಗಿ ಘೋಷಿಸಲಾಯಿತು. * ಈ ಹುದ್ದೆಗೆ ನೇಮಕವಾದ ಏಷ್ಯಾ ಮತ್ತು ಭಾರತದ ಏಕೈಕ ವ್ಯಕ್ತಿ ಇವರಾಗಿದ್ದು, ನವೆಂಬರ್ 1 ರಂದು ಜಿನೀವದಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ. ಇದು 6 ವರ್ಷ ಅವಧಿಯದ್ದಾಗಿರುತ್ತದೆ. * ಜಾಗತಿಕ ಮಟ್ಟದಲ್ಲಿ ವರ್ಣಭೇದ ನೀತಿ, ಜನಾಂಗೀಯ ತಾರತಮ್ಯ ಕ್ಸೆನೊಪೋ(ವಿದೇಶಿಯರ ಬಗ್ಗೆ ಭಯ), ಅಸಹಿಷ್ಣುತೆ, ಸಂಬಂಧಿಸಿದ ವಿಷಯಗಳನ್ನು ಇವರು ಸ್ವತಂತ್ರವಾಗಿ ಕಾರ್ಯನಿರ್ವಹಿಸಲಿದ್ದಾರೆ.