Job Description: * ಅಕ್ಟೋಬರ್ 21 ರಿಂದ 3 ದಿನಗಳ ಕಾಲ "ಸಂಗಂ" ಎಂಬ ಹೆಸರಿನ ವಿಶ್ವ ಕವಿ ಸಮ್ಮೇಳನ ನಡೆಯಲಿದೆ, "ಅರಿವು" ಸಂಸ್ಥೆ ಕೇಂದ್ರ ಸಾಹಿತ್ಯಅಕಾಡೆಮಿ ಪ್ರಶಸ್ತಿ,ಕರ್ನಾಟಕ ಸಾಹಿತ್ಯಅಕಾಡೆಮಿ ಪ್ರಶಸ್ತಿ, ಪ್ರವಾಸೋದ್ಯಮ ಇಲಾಖೆ ಮತ್ತು ಕನ್ನಡ - ಸಂಸ್ಕೃತಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಈ ಸಮ್ಮೇಶನವು ನಡೆಯಲಿದೆ. * 21 ರಂದು ಬೆಳಿಗ್ಗೆ 11 ಗಂಟೆಗೆ ಬಿಐಟಿಎಂ ಕಾಲೇಜು ಸಭಾಂಗಣದಲ್ಲಿ ಕವಿ ಸಮ್ಮೇಳನ ಉದ್ಘಾಟಿಸುವರು ಎಂದು ಸಂಗಂ ಸಂಘಟನಾ ಅಧ್ಯಕ್ಷ ಡಾ. ಅರವಿಂದ ಪಟೇಲ್, ಪ್ರಧಾನ ಪ್ರಯೋಜಕ ಸಿರಿಗೇರಿ ಪನ್ನಾರಾಜ್ ಅಕ್ಟೋಬರ್ 19 ರಂದು ತಿಳಿಸಿದ್ದಾರೆ. * ಬಳ್ಳಾರಿಯ ಶಾಸಕರಾದ ಜಿ. ಸೋಮಶೇಖರ್ ರೆಡ್ಡಿ ಅಧ್ಯಕ್ಷತೆ ವಹಿಸಲಿದ್ದಾರೆ, ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು, ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. * 22 ರಂದು ಸಾಯಂಕಾಲ ಸಾಹಿತ್ಯ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಯವರು ಕೂಡ ಭಾಗವಹಿಸಲಿದ್ದಾರೆ. ಈ ಸಾಹಿತ್ಯ ಪುರಸ್ಕಾರವು 25 ಸಾವಿರ ನಗದು ಹಣವನ್ನು ಒಳಗೊಂಡಿದೆ. * ಹಲವಾರು ಕವಿಗಳು ಸೇರಿಂದಂತೆ 23 ರಂದು ಸಮಾರೋಪ ಸಮಾರಂಭವನ್ನು ಮಾಡುವರು ಎಲ್ ಹನುಮಂತಯ್ಯ ರವರು ಸಮಾರೋಪ ಭಾಷಣ ಮಾಡಲಿದ್ದಾರೆ, ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.