Job Description: * 33 ಕೋಟಿ ಬೆಲೆಬಾಳುವ ಕಳ್ಳತನವಾಗಿ ಅಮೆರಿಕ ಸೇರಿದ್ದ 307 ಅಮೂಲ್ಯ ಪುರಾತನ ಶಿಲ್ಪ ಮತ್ತು ಕಲಾಕೃತಿಗಳನ್ನು ಭಾರತಕ್ಕೆ ಮರಳಿಸಿದೆ.* ಇವುಗಳಲ್ಲಿ ಬಹುತೇಕ ವಸ್ತುಗಳು ಪುರಾತನ ವಿಗ್ರಹಗಳ ಕಳ್ಳಸಾಗಣೆದಾರ ಸುಭಾಷ್ ಕಪೂರ್‌ ಗ್ಯಾಂಗ್ ಕದ್ದಿದ್ದಾಗಿವೆ ಕೃತಿಗಳು ಸಂಗ್ರಹಾಗಾರದಲ್ಲಿದ್ದವು.* ಭಾರತಕ್ಕೆ ಮರಳಿಸಿದ 307 ಕಲಾಕೃತಿಗಳಲ್ಲಿ 235 ಕಪೂರ್‌ನ ವಿಚಾರಣೆಯಿಂದ ಸಿಕ್ಕ ಮಾಹಿತಿಯಿಂದ ವಶಪಡಿಸಿಕೊಂಡಿದ್ದಾಗಿವೆ, ಕಫೂರ್ ನನ್ನು 2012 ರಲ್ಲಿ ತಮಿಳುನಾಡಿನ ತಿರುಚ್ಚಿ ಜೈಲಿನಲ್ಲಿ ಬಂಧಿಸಲಾಗಿದೆ ವಿಚಾರಣೆ ಬಾಕಿಯಿದೆ ಎಂದು ಮ್ಯಾನ್‌ಹಟನ ಜಿಲ್ಲಾ ಅಟಾರ್ನಿ ಕಚೇರಿ ಹೇಳಿಕೆಯೊಂದರಲ್ಲಿ ತಿಳಿಸಿದೆ. * ಆಫ್ಘಾನಿಸ್ತಾನ, ಕಾಂಬೋಡಿಯಾ, ಭಾರತ, ಇಂಡೋನೇಷ್ಯಾ, ಮ್ಯಾನ್ಮಾರ್, ನೇಪಾಳ, ಪಾಕಿಸ್ತಾನ, ಶ್ರೀಲಂಕಾ, ಥಾಯ್ಲೆಂಡ್ ಮತ್ತಿತರ ದೇಶಗಳಿಂದ ಪುರಾತನ ವಸ್ತುಗಳನ್ನು ದೋಚಲು ಕಪೂರ್ ಮುಂದಾಗಿದ್ದ. * ನ್ಯೂಯಾರ್ಕ್‌ನಲ್ಲಿರುವ ಭಾರತದ ಕಾನ್ಸುಲೇಟ್ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಪುನರಾಗಮನ ಸಮಾರಂಭದಲ್ಲಿ ಪುರಾತನ ಕಲಾಕೃತಿಗಳನ್ನು ಭಾರತಕ್ಕೆ ಹಸ್ತಾಂತರಿಸಲಾಯಿತು.* ಭಾರತದ ಕಾನ್ಸುಲ್ ಜನರಲ್ ರಣಧೀರ್ ಜೈಸ್ವಾಲ್‌ ಮತ್ತು ಅಮೆರಿಕದ ಅಂತರಿಕ ಭದ್ರತಾ ತನಿಖೆಗಳ (ಎಚ್‌ಎಸ್‌ಐ) ಅಧಿಕಾರಿ ಟಾಮ್ ಲಾವು ಮುಂತಾದವರು ಭಾಗವಹಿಸಿದ್ದರು ಬೆರಗುಗೊಳಿಸುವ ನೂರಾರು ಕಲಾಕೃತಿಗಳನ್ನು ಭಾರತದ ಜನರಿಗೆ ಮರಳಿಸಲು ನಮಗೆ ಹೆಮ್ಮೆಯಾಗುತ್ತದೆ.