Job Description: * ಗಿನ್ನೆಸ್‌ ವಿಶ್ವ ದಾಖಲೆ ಸಂಸ್ಥೆ (ಜಿಡಬ್ಲ್ಯುಆರ್) ಅಧಿಕೃತವಾಗಿ ಸೋಮವಾರವು (ಅಕ್ಟೋಬರ್17) 'ವಾರದ ಅತ್ಯಂತ ಕೆಟ್ಟ ದಿನ' ಎಂದು ಅಧಿಕೃತವಾಗಿ ಘೋಷಿಸಿದೆ.* ಇಡೀ ವಾರದ ಒತ್ತಡದ ಕೆಲಸಗಳಿಂದ ವಾರಾಂತ್ಯದ ರಜೆಯಿಂದ ವಿರಾಮ ಪಡೆದು ಸೋಮವಾರ ಮತ್ತೆ ರಜೆಯ ಗುಂಗಿನಲ್ಲೇ ಇರುವವರಿಗೆ ಒಂದು ರೀತಿಯ ಕಿರಿಕಿರಿಯಂತೆ ಭಾಸವಾಗುವುದರಿಂದ ಸೋಮವಾರಕ್ಕೆ ಈ ರೀತಿಯಾಗಿ ಹೇಳಲಾಗಿದೆ. * ಜಿಡಬ್ಲ್ಯುಆರ್ ಕೊನೆಗೂ ಇದಕ್ಕೆ ಮಾನ್ಯತೆ ಕೊಟ್ಟಿರುವುದಕ್ಕೆ ಟ್ವಿಟರ್ ಬಳಕೆದಾರರು ಸಂತೋಷ ವ್ಯಕ್ತಪಡಿಸಿದ್ದಾರೆ ಈ ಘೋಷಣೆಗೆ ಬಹಳ ದೀರ್ಘಕಾಲ ಹಿಡಿಯಿತು ಎಂದು ಕೆಲವರು ಟಿಪ್ಪಣಿ ಮಾಡಿದ್ದಾರೆ.* ಸೋಮವಾರ ತುಂಬಾ ನಿಧಾನ ಹಾಗೂ ಬೋರಿಂಗ್ ಎಂದು ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳುತ್ತಾರೆ ಗಿನ್ನೆಸ್ ವಿಶ್ವ ದಾಖಲೆ ಈ ಅಭಿಪ್ರಾಯಕ್ಕೆ ಮನ್ನಣೆ ನೀಡಿದೆ ಸೋಮವಾರವನ್ನು ಮುಂಗೋಪಕ್ಕೆ ಕಾರಣವೆಂದು ಅಧಿಕೃತವಾಗಿ ಹೇಳಲಾಗಿದೆ.