Job Description: * ಪ್ರಧಾನಿ ನರೇಂದ್ರ ಮೋದಿ ಅಕ್ಟೋಬರ್ 18 ರಂದು ಜಗತ್ತಿಗೆ ನರಕ ಸೃಷ್ಟಿಸುವ ಭಯೋತ್ಪಾದಕರು ಮತ್ತು ಕ್ರಿಮಿನಲ್‌ ಗಳು ಸುರಕ್ಷಿತ ಸ್ವರ್ಗಗಳನ್ನು ನಾಶಮಾಡಲು ಅಂತಾರಾಷ್ಟ್ರೀಯ ಸಮುದಾಯ ತ್ವರಿತವಾಗಿ ಕಾರ್ಯನಿರ್ವಹಿಸುವಂತೆ ಕರೆ ನೀಡಿದರು. * ಇಂಟರ್ ಪೋಲ್' ಅಂತಾರಾಷ್ಟ್ರೀಯ ಪೊಲೀಸ್‌ ಸಂಸ್ಥೆಯ 90 ನೇ ಮಹಾ ಅಧಿವೇಶನ ಉದ್ಘಾಟಿಸಿ ಅಧಿವೇಶನದ ಸ್ಮರಣಾರ್ಥ ಹೊರತರಲಾದ ವಿಶೇಷ ಅಂಚೆ ಚೀಟಿ ಮತ್ತು 100 ರೂಪಾಯಿ ನಾಣ್ಯವನ್ನು ಮೋದಿಯವರು ಬಿಡುಗಡೆಗೊಳಿಸಿದರು.* ಹಾನಿಕಾರಕ ಭಯೋತ್ಪಾದನೆ, ಭ್ರಷ್ಟಾಚಾರ, ಮಾದಕದ್ರವ್ಯ ಕಳ್ಳಸಾಗಾಟ, ವನ್ಯಜೀವಿಗಳ ಬೇಟೆ ಮತ್ತು ಸಂಪತ ಅಪರಾಧಗಳ ಬಗ್ಗೆ ಎಚ್ಚರದಿಂದ ಇರುವುದು ಅಗತ್ಯ. ಈ ಅಪಾಯಗಳು ಹಿಂದೆಂದಿಗಿಂತ ಹೆಚ್ಚು ವೇಗವಾಗಿ ಬದಲಾಗುತ್ತಿವೆ.* ಭಾರತ ಹಲವು ದಶಕಗಳಿಂದ ಅಂತಾರಾಷ್ಟ್ರೀಯ ಭಯೋತ್ಪಾದನೆಯ ವಿರುದ್ಧ ಹೋರಾಟ ನಡೆಸುತ್ತಿದೆ. 'ಇಡೀ ಜಗತ್ತು ಎಚ್ಚರಗೊಳ್ಳುವುದಕ್ಕೂ ಮುಂಚೆಯೇ ಸುರಕ್ಷತೆ ಮತ್ತು ಭದ್ರತೆಯ ಮೌಲ್ಯವನ್ನು ನಾವು ತಿಳಿದುಕೊಂಡಿದ್ದೇವೆ ಎಂದರು.*ಗೃಹ ಸಚಿವ ಅಮಿತ್ ಷಾ, ಇಂಟರ್‌ಫೋಲ್ ಅಧ್ಯಕ್ಷ, ಅಹಮದ್‌ ನಾಸಿರ್ ಅಲ್ ರೈಸ್ ಮತ್ತು ಮಹಾ ಕಾರ್ಯದರ್ಶಿ ಜರ್ಗನ್ ಸ್ಟಾಕ್ ಸೇರಿದಂತೆ 195 ಸದಸ್ಯ ರಾಷ್ಟ್ರಗಳ ಎರಡು ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು. ಸುಮಾರು 25 ವರ್ಷಗಳ ನಂತರ, ದೇಶದ ಸ್ವಾತಂತ್ರ್ಯದ 75ನೇ ವರ್ಷಾಚರಣೆ ಸಂದರ್ಭದಲ್ಲಿ ಭಾರತ ಇಂಟರ್ ಫೋಲ್ ಮಹಾಸಭೆಯ ಆತಿಥ್ಯ ವಹಿಸಿದೆ.* ಅಧಿವೇಶನದ ಸ್ಮರಣಾರ್ಥ ಅಂಚೆ ಚೀಟಿಯನ್ನು ಪ್ರಧಾನಿ ಮೋದಿ ಮತ್ತು ಕಾಂಟರ್‌ಫೋಲ್‌ ಅಧ್ಯಕ್ಷ ಅಹ್ಮದ್‌ ನಾಸಿರ್ ಬಿಡುಗಡೆ ಮಾಡಿದರು.* 'ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಭಯೋತ್ಪಾದಕ ಹಫೀಜ್‌ ಸಯೀದ್‌ನನ್ನು ನೀವು ಭಾರತಕ್ಕೆ ಹಸ್ತಾಂತರಿಸುತ್ತೀರಾ' ಎಂಬ ಪ್ರಶ್ನೆ ಇಂಟರ್‌ ಪೋಲ್ ಸಭೆಯಲ್ಲಿ ಪಾಕ್ ಪ್ರತಿನಿಧಿಗಳಿಗೆ ಎದುರಾಯಿತು, ಪದೇ ಪದೆ ಕೇಳಿದ ಪ್ರಶ್ನೆಗಳಿಗೆ ಪಾಕಿಸ್ತಾನದ ಫೆಡರಲ್ ತನಿಖಾ ಸಂಸ್ಥೆಯ (ಎಫ್‌ಐಎ ಮಹಾ ನಿರ್ದೇಶಕ ಮೊಹನ್ ಬಟ್ ಉತ್ತರಿಸದೆ ಇದ್ದರು , ದಾವೂದ್ ಮತ್ತು ಸಯೇದ್ ಇರುವಿಕೆಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ