Job Description: * ಜಾಗತಿಕ ಹಸಿವಿನ ಸೂಚ್ಯಂಕವು ಜಾಗತಿಕ, ಪ್ರಾದೇಶಿಕ ಹಾಗು ರಾಷ್ಟೀಯ ಮಟ್ಟದಲ್ಲಿ ಹಸಿವನ್ನು ಸಮಗ್ರವಾಗಿ ಅಳೆಯುವ ಸಾಧನವಾಗಿದೆ. * 2022 ರ ಸೂಚ್ಯಂಕದ ವರದಿಯ ಪ್ರಕಾರ ಭಾರತವು ಅತ್ಯಂತ ಹಸಿವಿನ ದೇಶ ಎಂದು ತಿಳಿಯಲ್ಪಟ್ಟಿದೆ, 121 ದೇಶಗಳ ಪೈಕಿ ಭಾರತವು 107 ಸ್ಥಾನ ಪಡೆದುಕೊಂಡಿದೆ. * 2021 ರಲ್ಲಿ ಭಾರತದ ಸ್ಥಾನವು 101 ಇತ್ತು, ಹಾಗು 2020 ರಲ್ಲಿ 94 ನೇ ಸ್ಥಾನದಲ್ಲಿತ್ತು.* ಭಾರತದಲ್ಲಿ 19.3 ರಷ್ಟು ಮಕ್ಕಳ ಅಪೌಷ್ಟಿಕತೆಯಿದೆ, ಇದು ಜಗತ್ತಿನಲ್ಲಿ ಅತಿಹೆಚ್ಚು ಅಪೌಷ್ಟಿಕತೆ ಎನಿಸಿಕೊಂಡಿದೆ. ಒಟ್ಟಾರೆ 29 .1 ಅಂಕ ಪಡೆದುಕೊಂಡಿದೆ. * ಅಪೌಷ್ಠಿಕತೆಯು 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ತೂಕ , ಬೆಳವಣಿಗೆ ಕಡಿಮೆ ಇರುವದು ಮತ್ತು ಮರಣದ ಪ್ರಮಾಣವು ಹೆಚ್ಚಾಗಿರುವದನ್ನು ಪರಿಗಣಿಸಿ ಜಿಎಚ್ಐ ಅಂಕಗಳನ್ನು ನೀಡಿದೆ. * ಭಾರತದ ನೆರೆಯ ದೇಶಗಳಾದ ನೇಪಾಳ (81), - ಪಾಕಿಸ್ತಾನ (99) - ಶ್ರೀಲಂಕಾ (64) - ಬಾಂಗ್ಲಾದೇಶ (84) - ಭಾರತಕ್ಕೆ 29.1 ಅಂಕವನ್ನು ನೀಡಲಾಗಿದ್ದು, ಇದು ಹಸಿವಿನ ಮಟ್ಟದ ‘ಗಂಭೀರ’ ವಿಭಾಗಕ್ಕೆ ಸೇರಿದೆ. * ಚೀನಾ, ಟರ್ಕಿ, ಕುವೈತ್ ಸೇರಿದಂತೆ ಹದಿನೇಳು ದೇಶಗಳು GHI ಸ್ಕೋರ್‌ನಲ್ಲಿ ಐದಕ್ಕಿಂತ ಕಡಿಮೆ ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿವೆ ಎಂದು ತಿಳಿಯಲಾಗಿದೆ.