Job Description: * ಪರಿಸರಕ್ಕೆ ಹಾನಿಕಾರಕವಾದ ತ್ಯಾಜ್ಯವನ್ನು ನಿರ್ವಹಿಸದ ಕಾರಣಕ್ಕೆ ಕರ್ನಾಟಕ ಸರ್ಕಾರವು ಪರಿಸರ ಪರಿಹಾರದಲ್ಲಿ 2900 ಕೋಟಿ ದಂಡ ವಿಧಿಸಿ ರಾಷ್ಟೀಯ ಹಸಿರು ನ್ಯಾಯ ಮಂಡಳಿ ಆದೇಶಿಸಿದೆ. * ಕಸ ವಿಲೇವಾರಿಗೆ ಕೈಗೊಂಡ ಉಪಕ್ರಮಗಳ ಬಗ್ಗೆ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ, ವಂದಿತಾ ಶರ್ಮಾರವರು ಎನ್ ಜಿ ಟಿ ಗೆ ಪ್ರಮಾಣಪತ್ರ ಸಲ್ಲಿಸಿದ್ದರು. * ವರದಿಯನ್ನು ಪರಿಶೀಲಿಸಿದ ಎನ್ ಜಿ ಟಿ ಮುಖ್ಯಸ್ಥ ನ್ಯಾಯಮೂರ್ತಿ ಆದರ್ಶ ಕುಮಾರ ಗೋಯಲ್, ನ್ಯಾಯಮೂರ್ತಿ ಸುಧೀರ್ ಅಗರ್ವಾಲ್ ತಜ್ನ್ಯ ಸದಸ್ಯರಾದ ಪ್ರೊ. ಸೆಂಥಿಲ್ ವೆಲ್, ಡಾ ಆಫ್ರೋಜ್ ಅಹ್ಮದ್ ರವರನ್ನು ಒಳಗೊಂಡ ಪೀಠವು "ದ್ರವ ಹಾಗು ತ್ಯಾಜ್ಯ ವಿಲೇವಾರಿಯಲ್ಲಿ ಗಣನೀಯ ಸುಧಾರಣೆ ಆಗಿಲ್ಲ. ಇದರಿಂದ ಪರಿಸರದ ಮೇಲೆ ಭಾರಿ ಹಾನಿ ಆಗುತ್ತಿದೆ" ಎಂದು ಪೀಠ ಅಭಿಪ್ರಾಯ ಪಟ್ಟಿದೆ. * ಕರ್ನಾಟಕದಲ್ಲಿ 196 ಭೂಭರ್ತಿ ಘಟಕಗಳಿದ್ದು, ದಿನಂಪ್ರತಿ ಅಪಾರ ಪ್ರಮಾಣದ ಕಸವನ್ನು ಇಲ್ಲಿ ಕೇಂದ್ರೀಕರಿಸಲಾಗುತ್ತದೆ. - 1427 ದಶಲಕ್ಷ ಲೀಟರ್ ತ್ಯಾಜ್ಯ ನೀರು ಸಂಸ್ಕರಣೆ ಆಗುತ್ತಿಲ್ಲ ಇದಕ್ಕೆ 2,856 ಕೋಟಿ ಪರಿಹಾರ ಪಾವತಿಸಬೇಕು. - ಭೂಭರ್ತಿ ಘಟಕದಲ್ಲಿ 178.50 ಲಕ್ಷ ಟನ್ ಹಳೆಯ ಉಳಿದುಕೊಂಡಿದೆ, ಇದನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡದೇ ಕಾರಣಕ್ಕೆ 540 ಕೋಟಿ ಪಾವತಿಸಬೇಕು. - ಬೆಂಗಳೂರಿನ ಚಂದ್ರಾಪುರ ಕೆರೆ ಸಂರಕ್ಷಣೆಗೆ 500 ಕೋಟಿ ಪರಿಹಾರ * ತ್ಯಾಜ್ಯನೀರು ಸಂಸ್ಕರಣೆ - 3356 ದಶಸಲಕ್ಷ ಲೀಟರ್ ರಾಜ್ಯದಲ್ಲಿ ಪ್ರತಿನಿತ್ಯ ಉತ್ಪಾದನೆಯಾಗುವ ತ್ಯಾಜ್ಯ ನೀರು - 1929 ದಶಲಕ್ಷ ಲೀಟರ್ ಸಂಸ್ಕರಣೆ ಆಗುತ್ತಿರುವ ತ್ಯಾಜ್ಯನೀರು - 1427 ದಶಲಕ್ಷ ಲೀಟರ್ ಉತ್ಪಾದನೆ - ಸಂಸ್ಕರಣೆ ನಡುವಿನ ಅಂತರ - 804 ದಶಲಕ್ಷ ಲೀಟರ್ ಸಂಸ್ಕರಿಸಿದ ತ್ಯಾಜ್ಯನೀರನ್ನು ಕೃಷಿ, ಉದ್ಯಮಗಳಿಗೆ ಬಳಕೆ * ರಾಜ್ಯದ ಕಸ ವಿಲೇವಾರಿ - 15,334 ಟನ್ ರಾಜ್ಯದಲ್ಲಿ ಪ್ರತಿನಿತ್ಯ ಉತ್ಪಾದನೆಯಾಗುವ ಕಸ. - 9513 ಟನ್ ಸಂಸ್ಕರಣೆ ಆಗುವ ಕಸ. - 6181 ಟನ್ ಉತ್ಪಾದನೆ ಹಾಗು ಸಂಸ್ಕರಣೆ ನಡುವಿನ ಅಂತರ. - 179.79 ಲಕ್ಷ ಟನ್ ಭೂಭರ್ತಿ ಘಟಕಗಳಲ್ಲಿ ಇರುವ ಹಳೆಯ ಕಸ. - 1.38 ಲಕ್ಷ ಟನ್ ಹಳೆಯ ಕಸ ವಿಲೇವಾರಿ ಮಾಡಿರುವದು. - 196 ರಾಜ್ಯದಲ್ಲಿರುವ ಭೂಭರ್ತಿ ಘಟಕಗಳು.