Job Description: * ಅಕ್ಟೋಬರ್ 15 ರಂದು ಸಿಲೇಟ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಏಷ್ಯಾ ಕಪ್ ಕ್ರಿಕೆಟ್ ನಲ್ಲಿ ಭಾರತ ತಂಡವು ಶ್ರೀಲಂಕಾದ ವಿರುದ್ಧ ಜಯಗಳಿಸಿತು. * ಒಟ್ಟಾರೆ 2004 ರಿಂದ ಇಲ್ಲಿಯವರೆಗೆ (2022) ರ ವರೆಗೆ ಎಂಟು ಸಲ ಟೂರ್ನಿಯನ್ನು ಆಯೋಜಿಸಲಾಗಿತ್ತು, ಅದರಲ್ಲಿ 4 ಬಾರಿ ಏಕದಿನ ಹಾಗು ಇನ್ನುಳಿದವು ಟಿ 20 ಗಳಾಗಿವೆ. * 2021 ರಲ್ಲಿ ಭಾರತವು ಎರಡನೇ ಸ್ಥಾನ (ರನ್ನರ್ಸ್ ಅಪ್) ಆಗಿತ್ತು, ಬಾಂಗ್ಲಾದೇಶವು ವಿಜೇತವಾಗಿತ್ತು. * ಫೈನಲ್ ನಲ್ಲಿ ಶ್ರೀಲಂಕಾ ತಂಡವು ಟಾಸ್ ಗೆದ್ದಿದ್ದರಿಂದ ಆಯ್ಕೆಯಲ್ಲಿ ಬ್ಯಾಟಿಂಗ್ ನ್ನು ಆಯ್ಕೆ ಮಾಡಿಕೊಂಡಿತು 20 ಓವರ್ ಗಳಲ್ಲಿ 9 ವಿಕೆಟ್ ಹಾಗು 65 ರನ್ ಗಳಿಸಿತು, ಭಾರತದ ತಂಡವು 8.3 ಓವರ್ ಗಳಲ್ಲಿ 2 ವಿಕೆಟ್ ಗಳಿಗೆ 71 ರನ್ ಗಳಿಸಿತು. * * ಏಷ್ಯಾ ಕಪ್ ವಿಜೇತರು : - - 2004 ಏಕದಿನ ಪಂದ್ಯದಲ್ಲಿ ಭಾರತದ ಜಯ - 2005 ಏಕದಿನ ಭಾರತ ತಂಡ ಜಯ - 2006 ಏಕದಿನ ಭಾರತ - 2008 ಏಕದಿನ ಭಾರತ - 2012 ಟಿ 20 ಭಾರತ - 2016 ಟಿ 20 ಭಾರತ - 2018 ಟಿ 20 ಬಾಂಗ್ಲಾ - 2022 ಟಿ 20 ಭಾರತ * * ಟೂರ್ನಿಯಲ್ಲಿ ಹೆಚ್ಚು ರನ್ ಗಳಿಸಿದವರು : - - ಭಾರತದ ಜೆಮಿಮಾ ರಾಡ್ರಿಗಸ್ 8 ಪಂದ್ಯಗಳಲ್ಲಿ 217 ರನ್. - ಶ್ರೀಲಂಕಾದ ಹರ್ಷಿತಾ ಮಾಧವಿ 8 ಪಂದ್ಯಗಳಲ್ಲಿ 202 ರನ್. - ಭಾರತದ ಶೆಫಾಲಿ ವರ್ಮಾ 6 ಪಂದ್ಯಗಳಲ್ಲಿ 166 ರನ್. - ಪಾಕಿಸ್ತಾನದ ಸಿದ್ರಾ ಅಮೀನ್ 7 ಪಂದ್ಯಗಳಲ್ಲಿ 158 ರನ್. * * ಹೆಚ್ಚು ವಿಕೆಟ್ ಗಳಿಸಿದವರು : - - ಭಾರತದ ದೀಪ್ತಿ ಶರ್ಮಾ 8 ಪಂದ್ಯಗಳಲ್ಲಿ 13 ವಿಕೆಟ್ - ಶ್ರೀಲಂಕಾದ ಇನೊಕಾ ರಣವೀರಾ 8 ಪಂದ್ಯಗಳಲ್ಲಿ 13 ವಿಕೆಟ್ - ಪಾಕಿಸ್ತಾನದ ಒಮ್ಮೆಮಾ ಸೊಹೈಲ್ 7 ಪಂದ್ಯಗಳಲ್ಲಿ 10 ವಿಕೆಟ್ - ಬಾಂಗ್ಲಾದೇಶದ ರುಮಾನಾ ಅಹ್ಮದ್ 5 ಪಂದ್ಯಗಳಲ್ಲಿ 10 ವಿಕೆಟ್