Job Description: * ರೈತರಿಗೆ ಬೆನ್ನೆಲುಬಾಗಿರುವ ಜಾನುವಾರುಗಳಲ್ಲಿ ಇತ್ತೀಚಿಗೆ ಚರ್ಮಗಂಟು (ಲಂಪಿಸ್ಕಿನ್) ರೋಗವು ಕಂಡುಬರುತ್ತಿದೆ, ರೋಗದಿಂದ ಸಾವಿಗೀಡಾಗುತ್ತಿರುವ ಜಾನುವಾರುಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ರೈತರಲ್ಲಿ ಆತಂಕ ಹೆಚ್ಚಿಸಿದೆ. * 1929 ರಲ್ಲಿ ಆಫ್ರಿಕಾದಲ್ಲಿ ಕಾಣಿಸಿಕೊಂಡಿರುವ ಈ ರೋಗವು ಭಾರತದಲ್ಲಿ 2019 ರಲ್ಲಿ ಒಡಿಶಾದಲ್ಲಿ ಪತ್ತೆಯಾಗಿದೆ, * ಚರ್ಮಗಂಟು ರೋಗವು "ಕ್ಯಾಪ್ರಿಪಾಕ್ಸ್" ಎಂಬ ವೈರಾಣುವಿನಿಂದ ಹರಡುತ್ತದೆ, ಕರ್ನಾಟಕ, ರಾಜಸ್ಥಾನ್, ಗುಜರಾತ್, ಪಂಜಾಬ್, ಹರಿಯಾಣ, ಹಿಮಾಚಲ ಪ್ರದೇಶ, ಉತ್ತರಾಖಂಡ್, ಉತ್ತರ ಪ್ರದೇಶ, ಮಧ್ಯಪ್ರದೇಶ ಹಾಗೂ ಜಮ್ಮುವಿನಲ್ಲಿ ಕಂಡು ಬಂದಿದೆ.