Job Description: * ಸೌರವ್ ಗಂಗೂಲಿ (Sourav Gangul) ನಂತರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI) ನ ಭಾರತದ 1983 ರ ವಿಶ್ವಕಪ್ ವಿಜೇತ ತಂಡದ ಸದಸ್ಯ ರೋಜರ್ ಬಿನ್ನಿ (Roger Binny) ಅವರು ಅಧ್ಯಕ್ಷರಾಗಲಿದ್ದಾರೆ. * ಸೌರವ್ ಗಂಗೂಲಿಯವರು ಕಳೆದ 3 ವರ್ಷಗಳಿಂದ ಬಿಸಿಸಿಐ ಅಧ್ಯಕ್ಷರಾಗಿದ್ದಾರೆ ಮತ್ತು ಅಕ್ಟೋಬರ್ 18 ರಂದು ನಡೆಯಲಿರುವ ಮಂಡಳಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ (MGM) ಬಿನ್ನಿ ಅವರು ಮುಂದಿನ ಅಧ್ಯಕ್ಷರಾಗಲಿದ್ದಾರೆ ಎಂದು ಹೇಳಲಾಗಿದೆ. * 67 ವರ್ಷದ ಬೆಂಗಳೂರು ಮೂಲದ ಬಿನ್ನಿ, ಮಂಡಳಿಯ 40 ನೇ ಅಧ್ಯಕ್ಷರಾಗಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.* ರಾಜೀವ್ ಶುಕ್ಲಾ ರವರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI)ನ ಉಪಾಧ್ಯಕ್ಷರಾಗಿ ಮುಂದುವರೆಯಲಿದ್ದಾರೆ. * ಅಕ್ಟೋಬರ್ 18 ರಂದು ರೋಜೆನ್ ಬಿನ್ನಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಲ್ಲ ಅಧಿಕಾರಿಗಳು ಅವಿರೋಧವಾಗಿ ಆಯ್ಕೆ ಆಗಿರುವದರಿಂದ ಚುನಾವಣೆ ನಡೆಯುವದಿಲ್ಲ.* 1983ರ ವಿಶ್ವಕಪ್‌ನಲ್ಲಿ ಭಾರತವನ್ನು ಚಾಂಪಿಯನ್ ಮಾಡುವಲ್ಲಿ ರೋಜರ್ ಬಿನ್ನಿಯವರ ಪಾತ್ರ ಪ್ರಮುಖವಾಗಿತ್ತು.* ಕನ್ನಡಿಗರಾದ ರೋಜರ್ ಬಿನ್ನಿಯವರು ಭಾರತದ ಪರ ಒಟ್ಟು 27 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ, ಬ್ಯಾಟಿಂಗ್‌ನಲ್ಲಿ 23.06 ಸರಾಸರಿಯಲ್ಲಿ 830 ರನ್ ಗಳಿಸಿದ್ದು, 5 ಅರ್ಧಶತಕದಷ್ಟು ರನ್ ತಗೆದಿದ್ದಾರೆ. * 72 ಏಕದಿನ ಪಂದ್ಯಗಳ ಮೂಲಕ 16.13 ಸರಾಸರಿಯಲ್ಲಿ 629 ರನ್ ಗಳಿಸಿದ್ದಾರೆ ಮತ್ತು 1 ಅರ್ಧಶತಕ ರನ್ ತಗೆದಿದ್ದಾರೆ, ಬೌಲಿಂಗ್‌ನಲ್ಲಿ ಬಿನ್ನಿ 27 ಟೆಸ್ಟ್ ಗಳಿಂದ 47 ವಿಕೆಟ್ ಪಡೆದಿದ್ದಾರೆ, 2 ಬಾರಿ 5 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಇನ್ನು 72 ಏಕದಿನ ಪಂದ್ಯಗಳಿಂದ 77 ವಿಕೆಟ್ ಪಡೆದು ಸಾಧನೆ ಮಾಡಿದ್ದಾರೆ.