Job Description: * ಹೆಣ್ಣು ಮಕ್ಕಳ ಪ್ರಾಮುಖ್ಯತೆ ಮತ್ತು ಸಂಭಾವ್ಯ ಹೆಣ್ಣುಮಕ್ಕಳು ನಮ್ಮ ಸಮಾಜದ ಭವಿಷ್ಯದ ಬಗ್ಗೆ ಜಾಗೃತಿ ಮೂಡಿಸಲು ಅಕ್ಟೋಬರ್ 11 (October 11) ರಂದು ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು (International Day of the Girl Child) ಆಚರಿಸಲಾಗುತ್ತದೆ.* 2022 ರಲ್ಲಿ 10 ನೇ ವರ್ಷದ ವಿಶ್ವ ಅಂತರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಆಚರಿಸಲಾಗುತ್ತಿದೆ. * ಹೆಣ್ಣು ಮಕ್ಕಳ ಅಂತಾರಾಷ್ಟ್ರೀಯ ದಿನದ ಈ ವರ್ಷದ ಥೀಮ್ "ನಮ್ಮ ಸಮಯ ಈಗ-ನಮ್ಮ ಹಕ್ಕುಗಳು, ನಮ್ಮ ಭವಿಷ್ಯ" ಇದಾಗಿದೆ. * 1995 ರಲ್ಲಿ ಬೀಜಿಂಗ್ ಮೊಟ್ಟ ಮೊದಲ ಬಾರಿಗೆ ಹೆಣ್ಣುಮಕ್ಕಳ ಹಕ್ಕುಗಳನ್ನು ಮುನ್ನಡೆಸಲು ಕ್ರಿಯಾ ಯೋಜನೆಯನ್ನು ಪ್ರಸ್ತಾಪಿಸಿತು, 2011 ರಲ್ಲಿ, ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿ 66/170 ನಿರ್ಣಯವನ್ನು ಅಂಗೀಕರಿಸಿತು ಹಾಗು ಅಕ್ಟೋಬರ್ 11 ಅನ್ನು ಹೆಣ್ಣು ಮಗುವಿನ ಅಂತರರಾಷ್ಟ್ರೀಯ ದಿನವಾಗಿ ಆಚರಿಸಲು ಅನುಮತಿ ನೀಡಿತು.* ಪ್ರತಿ ವರ್ಷ, ವರ್ಷದ ಅತ್ಯಂತ ಪ್ರಚಲಿತ ಸಮಸ್ಯೆಯ ಮೇಲೆ ಕೇಂದ್ರೀಕರಿಸಲು ಹೊಸ ಥೀಮ್ ನೊಂದಿಗೆ ವಿಶ್ವ ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತದೆ. * ಈ ಆಚರಣೆಯ ಮುಖ್ಯ ಉದ್ದೇಶ ಜಗತ್ತಿನಾದ್ಯಂತ ತುಳಿತಕ್ಕೊಳಗಾದ ಹೆಣ್ಣುಮಕ್ಕಳ ಹಕ್ಕುಗಳಿಗೆ ಧ್ವನಿಯ ಅಗತ್ಯವಿದೆ, ಹೆಣ್ಣು ಮಕ್ಕಳ ಅಂತರರಾಷ್ಟ್ರೀಯ ದಿನವು ಜನರು ಬದಲಾವಣೆಯ ಧ್ವನಿಯಾಗಲು ಮತ್ತು ಅವರನ್ನು ಸಬಲೀಕರಣಗೊಳಿಸಲು ಕರೆ ನೀಡುತ್ತದೆ