Job Description: * ಮಧ್ಯಪ್ರದೇಶದ ಉಜ್ಜೈನಿಯ ಮಹಾಕಾಳೇಶ್ವರ ದೇಗುಲದ ಆವರಣದಲ್ಲಿ ‘ಶ್ರೀ ಮಹಾಕಾಲ ಲೋಕ’ ಕಾರಿಡಾರ್‌ನ ಮೊದಲ ಹಂತವನ್ನು ಪ್ರಧಾನಿ ನರೇಂದ್ರ ಮೋದಿಯವರು ಅಕ್ಟೋಬರ್ 12 ರಂದು ಲೋಕಾರ್ಪಣೆ ಮಾಡಿದ್ದಾರೆ. ಸಾಂಪ್ರದಾಯಿಕ ಧೋತಿ ಮತ್ತು ಶಾಲು ಧರಿಸಿ ದೇಗುಲ ಪ್ರವೇಶಿಸಿ ಮಹಾಕಾಲನಿಗೆ ಪೂಜೆ ಸಲ್ಲಿಸಿದರು.* ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಮತ್ತು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ಅವರು ಕೂಡ ಉಪಸ್ಥಿತರಿದ್ದರು. * ಮಹಾಕಾಳೇಶ್ವರ ದೇಗುಲದ ಮೊದಲ ಹಂತದ ಅಭಿವೃದ್ಧಿ ಯೋಜನೆಯಾಗಿದೆ, ಇನ್ನು ಮುಂದೆ ಉಜ್ಜೈನಿಗೆ ಪ್ರವಾಸಿಗರ ಸಂಖ್ಯೆ ಸಾಕಷ್ಟು ಹೆಚ್ಚಳವಾಗುವ ನಿರೀಕ್ಷೆಯಿದೆ ಎನ್ನಲಾಗಿದೆ. * ಯೋಜನೆಯಡಿಯಲ್ಲಿ, ದೇವಾಲಯದ ಆವರಣವನ್ನು ಸುಮಾರು ಏಳು ಪಟ್ಟು ವಿಸ್ತರಿಸಲಾಗುತ್ತದೆ, ಇಡೀ ಯೋಜನೆಯ ಒಟ್ಟು ವೆಚ್ಚ ಸುಮಾರು 850 ಕೋಟಿ ರೂ ಆಗಿದೆ.* ಕಾಶಿ ವಿಶ್ವನಾಥದ ಬಳಿಕ ಮೋದಿ ಲೋಕಾರ್ಪಣೆ ಮಾಡಿದ ಎರಡನೇ ದೇಗುಲ ಕಾರಿಡಾರ್ ಇದಾಗಿದೆ.