Job Description: * ಫ್ರೆಂಚ್ ನ ಲೇಖಕಿ ಅನ್ನಿ ಎರ್ನಾಕ್ಸ್ ಅವರ ಸಾಹಿತ್ಯ ಕ್ಷೇತ್ರದ ಸಾಧನೆಗೆ 2022 ನೇ ಸಾಲಿನ ಸಾಹಿತ್ಯ ವಿಭಾಗದ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. * ಸ್ವೀಡನ್ ನ ಸ್ಟ್ಯಾಕ್ ಹೋಂ ನಲ್ಲಿ ಅಕ್ಟೋಬರ್ 06 ರಂದು ಸ್ವೀಡೆನ್ ಅಕಾಡೆಮಿಯ ಖಾಯಂ ಕಾರ್ಯದರ್ಶಿ ಮ್ಯಾಟ್ಸ್ ಮಾಲ್ಮ್ ಅವರು ಫ್ರೆಂಚ್ ಲೇಖಕಿ ಅನ್ನಿ ಎರ್ನಾಕ್ಸ್ 2022 ರ ಸಾಹಿತ್ಯ ವಿಭಾಗದ ನೊಬೆಲ್ ಪ್ರಶಸ್ತಿಗೆ ಆಯ್ಕೆಮಾಡಿದ್ದಾರೆ. * ಇವರು 81 ವರ್ಷದವರಾಗಿದ್ದರೂ ಕೂಡ ಇವರ ಬರಹಗಳು ವಸ್ತು ನಿಷ್ಠತೆ, ಮತ್ತು ಭಾವ ತೀವ್ರತೆಯನ್ನು ನೋಡಬಹುದಾಗಿದೆ. * ಅನ್ನಿ ಎರ್ನಾಕ್ಸ್ ರವರು ತಮ್ಮ ಬರಹದಲ್ಲಿ ಮಹಿಳೆಯರ ಮೇಲೆ ಆಗುವ ಶೋಷಣೆಯ ಬಗ್ಗೆ ( ಲೈಂಗಿಕ ಕಿರುಕುಳ, ಗರ್ಭಪಾತ, ಅನಾರೋಗ್ಯ) ಗಳ ಬಗ್ಗೆ ಮತ್ತು ಅನ್ನಿ ಅವರ ಪಾಲಕರ ಸಾವಿನ ನಂತರ ಅವರು ಅನುಭವಿಸಿದ ನೋವು, ಯಾತನೆಗಳನ್ನು ಇವರು ಈ ಕೃತಿಯಲ್ಲಿ ಬರೆದಿದ್ದಾರೆ. * ಈ ನೊಬೆಲ್ ಪ್ರಶಸ್ತಿಯನ್ನು ಸ್ವೀಡನ್ ಅಕಾಡೆಮಿಯಿಂದ ನೀಡಲಾಗುತ್ತದೆ ಮತ್ತು 10 ಮಿಲಿಯನ್ ಸ್ವೀಡಿಷ್ ಕ್ರೌನ್ಸ್ ($914,704) ಮೌಲ್ಯದ್ದಾಗಿದೆ.* ಈ ಹಣವು 1895 ರಲ್ಲಿ ಪ್ರಶಸ್ತಿಯ ಸೃಷ್ಟಿಕರ್ತ, ಸ್ವೀಡಿಷ್ ಸಂಶೋಧಕ ಆಲ್ಫ್ರೆಡ್ ನೊಬೆಲ್ ಅವರು ಬಿಟ್ಟ ಉಯಿಲಿನಿಂದ ಬಂದಿದೆ. ಕಳೆದ ವರ್ಷದ ನೊಬೆಲ್ ಸಾಹಿತ್ಯ ಪ್ರಶಸ್ತಿಯು ತಾಂಜೇನಿಯಾ ಮೂಲದ, ಯುಕೆ ಮೂಲದ ಬರಹಗಾರ ಅಬ್ದುಲ್ರಾಝಾಕ್ ಗುರ್ನಾಗೆ ಸಂದಿದೆ. ಅವರ ಕಾದಂಬರಿಗಳು ವ್ಯಕ್ತಿಗಳು ಮತ್ತು ಸಮಾಜಗಳ ಮೇಲೆ ವಲಸೆಯ ಪ್ರಭಾವವನ್ನು ತೋರಿಸುತ್ತದೆ.