Job Description: * ನಾಲ್ಕು ವರ್ಷ ಪೂರೈಸಿದ ಆಯುಷ್ಮಾನ್‌ ಭಾರತ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಹಾಗೂ ಒಂದು ವರ್ಷ ಪೂರೈಸಿದ ಅಯುಷ್ಮಾನ್ ಭಾರತ ಡಿಜಿಟಲ್ ಮಿಷನ್ (ಎನ್‌ ಡಿಎಚ್‌ಎಂ) ಯೋಜನೆಗಳ ಸಂಬಂಧ ನಡೆದ 'ಆರೋಗ್ಯ ಮಂಥನ್ 2022' ಕಾರ್ಯಕ್ರಮವನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವೀಯ ಇತ್ತೀಚೆಗೆ ಉದ್ಘಾಟಿಸಿದರು.* 74ನೇ ಸ್ವಾತಂತ್ರ್ಯ ದಿನದಂದು (2020ರಲ್ಲಿ) ಭಾರತ ಡಿಜಿಟಲ್ ಮಿಷನ್' ಪ್ರಾಯೋಗಿಕ ಯೋಜನೆಯನ್ನು ಪ್ರಕಟಿಸಿದ್ದರು. 'ಈಗ ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮಿಷನ್‌ ಉದ್ಘಾಟಿಸಲಾಗಿದ್ದು, ಇದರ ಅಡಿಯಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಗೂ 'ಡಿಜಿಟಲ್ ರೂಪ'ದ ಆರೋಗ್ಯ ಗುರುತಿನ ಚೀಟಿಯನ್ನು ಕೊಟ್ಟು ವಿಶೇಷ ಸಂಖ್ಯೆಯನ್ನು ನೀಡಲಾಗುತ್ತದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹೇಳಿದ್ದರು. * ಇದೊಂದು ಡಿಜಿಟಲ್ ರೂಪದ ಗುರುತಿನ ಆರೋಗ್ಯ ಚೀಟಿಯಾಗಿದ್ದು, ಇದರಲ್ಲಿ ವ್ಯಕ್ತಿಯೊಬ್ಬರ ಸಮಗ್ರ ಆರೋಗ್ಯ ಮಾಹಿತಿ ಇರುತ್ತದೆ. ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್, ಅಯುಷ್ಮಾನ್ ಭಾರತ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (AB PMJAY) ಅಡಿಯಲ್ಲಿ ಬರುತ್ತದೆ. * ಕುಟುಂಬ ಕಲ್ಯಾಣ ಸಚಿವಾಲಯ ವ್ಯಾಪ್ತಿಯಲ್ಲಿರುವ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರವು ಈ ಯೋಜನೆಯನ್ನು ವಿನ್ಯಾಸಗೊಳಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು 'ಆಯುಷ್ಮಾನ್ ದೇಶದಾದ್ಯಂತ ಅನುಷ್ಠಾನಗೊಳಿಸುತ್ತಿದೆ.* ಯೋಜನೆಯು ಆರು ಪ್ರಮುಖ ಅಂಶಗಳಾದ ಆರೋಗ್ಯ ಗುರುತಿನ ಚೀಟಿ, ಡಿಜಿ ಡಾಕ್ಟರ್, ಆರೋಗ್ಯ ಸೌಲಭ್ಯ "ನೋಂದಣಿ, ವೈಯಕ್ತಿಕ ಆರೋಗ್ಯ ದಾಖಲೆಗಳು, ಇ-ಫಾರ್ಮಸಿ ಮತ್ತು ಟೆಲಿಮೆಡಿಸಿನ್ ಅನ್ನು ಒಳಗೊಂಡಿದೆ. ಇವೆಲ್ಲವನ್ನು 01 ಕೇಂದ್ರ ಸರ್ಕಾರವೇ ನಿರ್ವಹಿಸುತ್ತದೆ.* ಈ ಯೋಜನೆ ಅಡಿಯಲ್ಲಿ, ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಆರೋಗ್ಯ ಗುರುತಿನ ಚೀಟಿ ಪಡೆಯುತ್ತಾನೆ. ಆ ಚೀಟಿಯಲ್ಲಿ ರೋಗಿಯ ವೈದ್ಯಕೀಯ ಪರೀಕ್ಷೆಗಳು, ರೋಗದ ವಿಧ ವೈದ್ಯರು ನೀಡಿದ ಪ್ರಿಸ್ಕ್ರಿಪನ್, ಔಷಧಗಳು, ಚಿಕಿತ್ಸೆಗಳು ಮತ್ತು ತೆಗೆದುಕೊಂಡ ರೋಗನಿರ್ಣಯದ ವಿವರಗಳನ್ನು ಒಳಗೊಂಡಿರುತ್ತದೆ.