Job Description: * ಕಳೆದ ವರ್ಷ "ಮಾತಾಡ್ ಮಾತಾಡ್ ಕನ್ನಡ" ಎಂಬ ಘೋಷವಾಕ್ಯದೊಂದಿಗೆ ಜರುಗಿದ್ದ ಕಾರ್ಯಕ್ರಮವು ಯಶಸ್ವಿಯಾಗಿತ್ತು. ಹಾಗಾಗಿ ಅಕ್ಟೋಬರ್ 28 ರಂದು ಕನ್ನಡದಲ್ಲಿ ಏಕಕಾಲದಲ್ಲಿ ರಾಜ್ಯಾದ್ಯಂತ ಕನ್ನಡ ಕವಿಗಳ ಜನಪ್ರಿಯತೆ ಗೀತೆಗಳ ಕೋಟಿ ಕಂಠ ಗಾಯನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಹಮ್ಮಿಕೊಂಡಿದ್ದಾರೆ. * ರಾಜ್ಯೋತ್ಸವ ಪ್ರಯುಕ್ತವಾಗಿ ಈ ಕಾರ್ಯಕ್ರಮವನ್ನು ಮಾಡಲಾಗಿದೆ, ಹಾಗಾಗಿ ಕರ್ನಾಟಕದ ಜನತೆ ಅಲ್ಲದೆ ಅನಿವಾಸಿ ಕನ್ನಡಿಗರು, ಹೊರನಾಡು ಮತ್ತು ಗಡಿನಾಡು ಕನ್ನಡಿಗರು ಎಲ್ಲರೂ ಕೂಡ ಭಾಗವಹಿಸಲಿದ್ದಾರೆ. * ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ವಿ ಸುನಿಲ್ ಕುಮಾರ್ ಅವರು ಈ ಕಾರ್ಯಕ್ರಮವನ್ನು ಕುರಿತು - "ವಿಶ್ವದಾದ್ಯಂತ ಕನ್ನಡದ ಕಂಪನ್ನು ಪಸರಿಸುವ ಕಾರ್ಯಕ್ರಮ ಇದಾಗಿದೆ" ಎಂದು ಹೇಳಿದ್ದಾರೆ. * ಈ ಕಾರ್ಯಕ್ರಮದಲ್ಲಿ ಈ ಬಾರಿ ಒಟ್ಟು 5 ಗೀತೆಗಳನ್ನು ಆಯ್ಕೆ ಮಾಡಲಾಗಿದೆ. 1 ಕುವೆಂಪು ಅವರ - ಜೈ ಭಾರತ ಜನನಿಯ ತನುಜಾತೆ 2 ಕುವೆಂಪು ಅವರ ಮತ್ತೊಂದು ಗೀತೆ - ಬಾರಿಸು ಕನ್ನಡ ಡಿಂಡಿಮವ 3 ಚನ್ನವೀರ ಕಣವಿ ಅವರ - ವಿಶ್ವವಿನೂತನ ವಿದ್ಯಾಚೇತನ ಸರ್ವ ಹೃದಯ ಸಂಸ್ಕಾರಿ 4 ಡಿ ಡಿ ಎಸ್ ಕರ್ಕಿ ಅವರ - ಹಚ್ಚೇವು ಕನ್ನಡದ ದೀಪ 5 ಹಂಸಲೇಖ ಅವರ - ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು * ಈ ಕಾರ್ಯಕ್ರಮವು ಎಲ್ಲ ಸರ್ಕಾರಿ ಕಛೇರಿಗಳಲ್ಲಿ, ಶಾಲಾ ಕಾಲೇಜುಗಳಲ್ಲಿ,ಕಡಲ ತೀರ, ಪ್ರವಾಸಿ ಸ್ಥಳಗಳು, ಕೋಟೆಗಳು, ಕಂಪನಿಗಳು, ಆಸ್ಪತ್ರೆ ಮತ್ತು ಜಿಲ್ಲಾ ಕೇಂದ್ರಗಳಲ್ಲಿ, ಗಾಂಧಿ ಪ್ರತಿಮೆ ಎದುರು ಹಾಗೂ ರೈಲು-ಬಸ್ ನಿಲ್ದಾಣಗಳಲ್ಲಿ ಈ ಅಭಿಯಾನ ನಡೆಯಲಿದೆ ಎಂದಿದ್ದಾರೆ.