Job Description: * ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ಅಪರೂಪದ ಟ್ರಾವೆನ್ ಕೋರ್ ಹಾರುವ ಅಳಿಲು ಪತ್ತೆಯಾಗಿದೆ. ಇವು ನಿಶಾಚರಿಯಾಗಿರುವದರಿಂದ ಕಾಣಿಸಿಕೊಳ್ಳುವದು ಅಪರೂಪ.* ನಿಸರ್ಗ ಕನ್ಸರ್ವೇಷನ್ ಟ್ರಸ್ಟ್ ನ ನಾಗರಾಜ್ ಬೆಳ್ಳೂರ್ ಅವರು ಇದೊಂದು ಚಿಕ್ಕ ಹಾರುವ ಅಳಿಲು ಎಂದು ಖಚಿತಪಡಿಸಿದ್ದಾರೆ. ಸ್ಥಳೀಯವಾಗಿ ಇದನ್ನು ದರಗು ಪಾಂಜ, ಚಿಕ್ಕ ಪಾಂಜ ಎಂದು ಕರೆಯುತ್ತಾರೆ. * ಪಶ್ಚಿಮ ಘಟ್ಟದಲ್ಲಿ ಕಾಣಿಸಿಕೊಂಡಿರುವ ಈ ಅಳಿಲು (ಟ್ರಾವನ್ ಕೋರ್) ಪ್ರಸ್ತುತ ದಕ್ಷಿಣ ಏಷ್ಯಾದ ಅತ್ಯಂತ ಚಿಕ್ಕ ಹಾರುವ ಅಳಿಲು ಜಾತಿಗಳಲ್ಲಿ ಒಂದಾಗಿದೆ. ಇದರ ಉದ್ದ 32 ಸೆ.ಮೀಟರ್ ಆಗಿರುತ್ತದೆ. * ಅಪರೂಪದ ಅಳಿಲುಗಳ ಗುಂಪಿನಲ್ಲಿ ಇದು ಕೂಡ ಒಂದಾಗಿದ್ದೂ, ರಾಜ್ಯದಲ್ಲಿ ದೈತ್ಯ ಹಾರುವ ಅಳಿಲು (ಇಂಡಿಯನ್ ಜೈ೦ಟ್) ಮತ್ತು ಟ್ರಾವನ್ ಕೋರ್ ಎಂಬ ಹಾರುವ ಅಳಿಲುಗಳ 2 ಗುಂಪುಗಳಿವೆ.* ನಶಿಸಿ ಹೋಗಿವೆ ಎಂದು ನಂಬಲಾದ ಟ್ರಾವನ್ ಕೋರ್ ನೂರು ವರ್ಷದ ನಂತರ ಕೇರಳದ ಪಶ್ಚಿಮ ಘಟ್ಟದಲ್ಲಿ ಪತ್ತೆಯಾಗಿತ್ತು ಎಂದು ಜೀವವೈವಿಧ್ಯ ಸಂಶೋಧಕ ಮಂಜುನಾಥ್ ನಾಯಕ್ ಹೇಳಿದ್ದಾರೆ.