Job Description: * ರೈತರ ಹಿತಾಸಕ್ತಿಯಿಂದ ತರಲಾಗಿದ್ದ ಅಡಿಕೆ ಆಮದು ನಿರ್ಬಂಧಕ್ಕೆ ಕೇಂದ್ರ ಸರ್ಕಾರ ತಿದ್ದುಪಡಿ ತಂದಿದೆ. * ಕಡಿಮೆ ಬೆಲೆಗೆ ಆಮದು ಮಾಡಿಕೊಳ್ಳುವದನ್ನು ತಡೆಗಟ್ಟುವ ನಿಟ್ಟಿನಲ್ಲಿ ಆಮದು ಬೆಲೆ ಮಿನಿಮಮ್ ಇಂಪೋರ್ಟ್ ಪ್ರೈಸ್ (ಎಂಐಪಿ) ಎಂಬ ನೀತಿಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿತ್ತು. * ಪ್ರತಿ ಕೆ ಜಿ ಗೆ 251 ರೂ ಎಂಐಪಿ ನಿಗದಿಸಲಾಗಿತ್ತು, ಈಗ ಭೂತಾನ್ ನಿಂದ ಎಂಐಪಿ ಇಲ್ಲದೆ ಪ್ರತಿ ವರ್ಷ 17000 ಟನ್ ಹಸಿ ಅಡಿಕೆ ಆಮದು ಮಾಡಿಕೊಳ್ಳಲು ವಾಣಿಜ್ಯ ಸಚಿವಾಲಯ ಅನುಮತಿ ನೀಡಿದೆ. * ಸರ್ಕಾರದ ದಾಖಲೆಗಳ ಪ್ರಕಾರ ಇದೆ ಮೊದಲು ಬಾರಿಗೆ ಭೂತಾನ್ ನಿಂದ ಅಡಿಕೆ ಆಮದು ಮಾಡಿಕೊಳ್ಳಲಾಗುತ್ತಿದೆ. * ಈ ಹಿಂದೆ ಆರ್ಥಿಕ ವರ್ಷದಲ್ಲಿ ಸರ್ಕಾರವು ಸುಮಾರು 4000 ಟನ್ ನಷ್ಟು ಹಸಿಅಡಿಕೆಯನ್ನು ಆಮದು ಮಾಡಿಕೊಂಡಿದೆ. ಈಗ ಸರ್ಕಾರದ ನಿರ್ಧಾರವು ಭೂತಾನ್ ನಿಂದ 17000 ಟನ್ ಹಸಿ ಅಡಿಕೆ ಆಮದು ಮಾಡಿಕೊಳ್ಳುವದಾಗಿದೆ. * ಆಮದು ಆಗುತ್ತಿರುವ ಹಸಿ ಅಡಿಕೆಗೆ ಪ್ರತಿ ಕೆ ಜಿ ಗೆ 251 ರೂ ಎಂಐಪಿ ನಿಂದ 360 ಎಂಐಪಿ ರೂ ಹೆಚ್ಚಿಸಬೇಕೆಂದು ಸರ್ಕಾರಕ್ಕೆ ಮನವಿ ನೀಡಲಾಗಿದೆ.