Job Description: * ಭಾರತೀಯ ಫುಟ್ಬಾಲ್ ತಂಡದ ನಾಯಕನ ಸುನಿಲ್ ಛೇಟ್ರಿಗೆ ಫೀಫಾ ವಿಶೇಷ ಗೌರವ ನೀಡಿದೆ. ಫುಟ್ಬಾಲ್ ಬದುಕಿನ ಬಗ್ಗೆ ವಿಶೇಷ ವಿಡಿಯೋ ಒಂದನ್ನು ಫೀಫಾ ಬಿಡುಗಡೆಗೊಳಿಸಿದೆ.* ಭಾರತದಲ್ಲಿ ಫುಟ್ಬಾಲ್ ಆಟದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ ಫುಟ್ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ ಅವರಿಗೆ ಫುಟ್ಬಾಲ್ ನ ಜಾಗತಿಕ ಸಂಸ್ಥೆ (ಫಿಫಾ) ದಿಂದ ವಿಶೇಷ ಗೌರವ.* ಸುನಿಲ್ ಚೆಟ್ರಿ ಅದ್ಭುತ ಸಾಧನೆಯನ್ನು ಮಾಡಿಕೊಂಡು ಬಂದಿದ್ದಾರೆ. ಕಳೆದ ಒಂದು ದಶಕದಲ್ಲಿ ಭಾರತೀಯ ಫುಟ್ಬಾಲ್‌ಗೆ ಛೆಟ್ರಿ ತಮ್ಮದೇ ಕೊಡುಗೆ ನೀಡಿದ್ದಾರೆ. * 38 ವರ್ಷದ ಚೆಟ್ರಿ ಅವರು ಅಂತರಾಷ್ಟ್ರೀಯ ಫುಟ್ಬಾಲ್ ನಲ್ಲಿ 84 ಗೋಲು ಗಳಿಸಿದ್ದಾರೆ.* ಕ್ರಿಸ್ಟಿಯಾನೊ ರೊನಾಲ್ಡೊ 117 ಮತ್ತು ಅರ್ಜೆಂಟೀನಾದ ಲಯೋನಲ್ ಮೆಸ್ಸಿ 90 ಗೋಲು ಮಾಡಿದ್ದಾರೆ. ಇವರುಗಳ ಪೈಕಿ ಚೆಟ್ರಿ ಯವರು ಮೊದಲೆರಡು ಸ್ಥಾನದಲ್ಲಿದ್ದಾರೆ. * ಫಿಫಾವು ಭಾರತೀಯ ಫುಟ್ಬಾಲ್ ತಂಡದ ನಾಯಕನ ಫುಟ್ಬಾಲ್ ಬದುಕಿನ ಬಗ್ಗೆ ವಿಶೇಷ ಶೀರ್ಷಿಕೆ (ಸಾಕ್ಷ್ಯಚಿತ್ರ)ವೊಂದನ್ನು ಬಿಡುಗಡೆಗೊಳಿಸಿದ್ದು, ಇದು ಮೂರು ಎಪಿಸೋಡ್‌ಗಳ ಸರಣಿಯಾಗಿದೆ. * ಇದಕ್ಕೆ "ಕ್ಯಾಪ್ಟನ್ ಫೆಂಟಾಸ್ಟಿಕ್" ಎಂದು ಹೆಸರಿಸಲಾಗಿದೆ.