Job Description: * ರಾಷ್ಟೀಯ ಕ್ರೀಡಾಕೂಟದ 36 ನೇ ಆವೃತ್ತಿಯನ್ನು ಗುಜರಾತ್ ನ ಅಹಮದಾಬಾದ್ ನಲ್ಲಿ ಉದ್ಘಾಟನೆ ಮಾಡಲಾಗಿದ್ದು, ಸಮಾರಂಭದಲ್ಲಿ ಕ್ರೀಡಾಕೂಟ ಆರಂಭವನ್ನು ನರೇಂದ್ರ ಮೋದಿ ಯವರು ಅಧಿಕೃತವಾಗಿ ಘೋಷಿಸಿದ್ದಾರೆ. *ರಾಷ್ಟೀಯ ಕ್ರೀಡಾಕೂಟವು ಸ್ವತಂತ್ರ ಪೂರ್ವದಲ್ಲೇ ಆರಂಭವಾಗಿವೆ. 1924, 26, 28 ರಲ್ಲಿ 3 ಆವೃತ್ತಿಯ ಕ್ರೀಡಾಕೂಟಗಳು ಲಾಹೋರ್ ನಲ್ಲಿ ನಡೆದಿದ್ದವು. * ಒಟ್ಟಾರೆ 36 ಕ್ರೀಡೆಗಳು ನಡೆಯಲಿದ್ದು, 28 ರಾಜ್ಯಗಳು, 8 ಕೇಂದ್ರಾಡಳಿತ ಪ್ರದೇಶಗಳಿಂದ 7 ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.ಕರ್ನಾಟಕದಲ್ಲಿ 2 ಬಾರಿ 1966 - ಬೆಂಗಳೂರಿನಲ್ಲಿ ಮತ್ತು 1997 ಬೆಂಗಳೂರು /ಮೈಸೂರಿನಲ್ಲಿ ನಡೆದಿದ್ದವು.* 7 ವರ್ಷಗಳ ನಂತರ ರಾಷ್ಟೀಯ ಕ್ರೀಡಾಕೂಟ ನಡೆಯಲಿದ್ದು, 2015 ರಲ್ಲಿ ಕೊನೆಯದಾಗಿ ಕೇರಳದಲ್ಲಿ 35 ನೇ ಆವೃತ್ತಿಯ ಕ್ರೀಡಾಕೂಟ ನಡೆದಿತ್ತು. * 2020 ರಲ್ಲಿ 36 ನೇ ಆವೃತ್ತಿಯನ್ನು ಗೋವಾದಲ್ಲಿ ನಿಗದಿಪಡಿಸಲಾಗಿತ್ತು. ಕೋರೋಣ ಕಾರಣದಿಂದ ರದ್ದಾಗಿತ್ತು. * 36 ನೇ ಆವೃತ್ತಿಯ ರಾಷ್ಟೀಯ ಕ್ರೀಡಾಕೂಟ ದಲ್ಲಿ ಕರ್ನಾಟಕದಿಂದ 421 ಕ್ರೀಡಾಪಟುಗಳು, 79 ಕೋಚ್ ಮ್ಯಾನೇಜರ್ ಗಳು ಒಟ್ಟಾರೆ 500 ಸದಸ್ಯರ ತಂಡ ಭಾಗವಹಿಸಲಿದೆ.