Job Description: * ದೇಶೀಯವಾಗಿ ನಿರ್ಮಿಸಲಾದ ಭಾರತೀಯ ನೌಕಾಪಡೆಯ ಸಮರನೌಕೆ 'ಐಎನ್‌ಎಸ್‌ ಸತ್ಪುರ'ವು ರಾಯಲ್ ಆಸ್ಟ್ರೇಲಿಯಾ ನೇವಿ ಆಯೋಜಿಸಿದ್ದ ಬಹುರಾಷ್ಟ್ರೀಯ ತಾಲೀಮು ಕಾಕಡು-2022 ರಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿದೆ.* ಭಾರತೀಯ ನೌಕಾ ಪಡೆಗಳಲ್ಲಿ ಹಿಂದಿದ್ದ ನೌಕೆಗಳಿಗಿಂತಲೂ ಅಧಿಕ ಸ್ಟೆಲ್ತ್ ಮತ್ತು ಲ್ಯಾಂಡ್ ಅಟ್ಯಾಕ್ ವೈಶಿಷ್ಟ್ಯಗಳನ್ನು ಈ ಐಎನ್‌ಎಸ್‌-ಸತ್ಪುರ ಹೊಂದಿದೆ. * 'ಕಾಕಡು 2022 (KA22)'ನಲ್ಲಿ ಭಾರತ, ಜಪಾನ್, ಆಸ್ಟ್ರೇಲಿಯಾ, ಮಲೇಷಿಯಾ, ನ್ಯೂಜಿಲೆಂಡ್, ಸಿಂಗಾಪುರ್ ಸೇರಿ 14 ನೌಕಾಪಡೆಗಳ ಹಡಗು ಭಾಗವಹಿಸಲಿವೆ.* ವಿಶಾಖಪಟ್ಟಣದಲ್ಲಿರುವ ಪೂರ್ವ ವಲಯದಲ್ಲಿ 75 ನೇ ಸ್ವಾತಂತ್ರೋತ್ಸವದ ಅಂಗವಾಗಿ ಸುದೀರ್ಘ ಅವಧಿಗೆ ನಿಯೋಜಿಸಿರುವ ಸಮರ ನೌಕೆಗಳಲ್ಲಿ ಈ ನೌಕೆಯೂ ಸೇರಿದೆ. * 6000 ಕಿಲೋ ಭಾರ ಇರುವ ಸತ್ಪುರ ಯುದ್ಧನೌಕೆಯಲ್ಲಿ ಕ್ಷಿಪಣಿ ಉಡಾವಣಾ ಸೌಲಭ್ಯವು ಇದೆ .