Job Description: * ಒಲಂಪಿಕ್ ಚಾಂಪಿಯನ್ ಎಂದು ಹೆಸರುವಾಸಿಯಾದ ಕೆನ್ಯಾದೇಶದ ಓಟಗಾರ ಏಲಿಯುಡ್ ಕಿಪ್ಚೋಗಿಯವರು ಮ್ಯಾರಥಾನ್ ನಲ್ಲಿ ತಮ್ಮದೇ ಹೆಸರಿನಲ್ಲಿ ವಿಶ್ವದಾಖಲೆಯನ್ನು ತಾವೇ ಮುರಿದಿದ್ದಾರೆ. * 2022 ಸೆಪ್ಟೆಂಬರ್ 25 ರಂದು ಬರ್ಲಿನ್ ಮ್ಯಾರಥಾನ್ ನಲ್ಲಿ 42.2 ಕಿಲೋಮೀಟರ್ ದೂರವನ್ನು 2 ಗಂಟೆ 1 ನಿಮಿಷ 9 ಸೆಂಕೆಂಡುಗಳಲ್ಲಿ ಓಡಿ ವಿಶ್ವದಾಖಲೆಯನ್ನು ಮಾಡಿದ್ದಾರೆ.* ಇದು ಕಿಪ್ಚೋಗಿ ಅವರಿಗೆ ದೊರೆತ ನಾಲ್ಕನೇ ಗೆಲುವಾಗಿದೆ. * 2018 ರಲ್ಲಿ ಬರ್ಲಿನ್ ನಲ್ಲಿ ಕಿಪ್ಚೋಗಿ ರವರ 2 ಗಂಟೆ 1 ನಿಮಿಷ 39 ಸೆಂಕೆಂಡುಗಳಲ್ಲಿ ಗುರಿ ತಲುಪಿದ್ದರು.* ಎಥಿಯೋಪಿಯಾದ ಟೀಗಿಸ್ಟ್ ಅಸೆಫಾ ಮಹಿಳೆಯರ ವಿಭಾಗದಲ್ಲಿ ಅಚ್ಚರಿಯ ಗೆಲುವು ಸಾಧಿಸಿದರು 2 ಗಂಟೆ 15 ನಿಮಿಷ 37 ಸೆಕೆಂಡುಗಳಲ್ಲಿ ಗುರಿ ತಲುಪುವಲ್ಲಿ ಮುಂದಾದರು. * ಪುರುಷರ ವಿಭಾಗದಲ್ಲಿ ಕೆನ್ಯಾದ ಮಾರ್ಕ್ ಕೊರಿಯರ್ 2 ಗಂಟೆ 5 ನಿಮಿಷ 58 ಸೆಕೆಂಡ್ ನಲ್ಲಿ ಗುರಿಮುಟ್ಟಿ ಎರಡನೆಯ ಸ್ಥಾನ ಪಡೆದಿದ್ದಾರೆ. * ಎಥಿಯೋಪಿಯಾದ ಟಡು ಅಬಾಟೆ ಯವರು 2 ಗಂಟೆ 6 ನಿಮಿಷ 28 ಸೆಕೆಂಡ್ ನಲ್ಲಿ ಗುರಿಮುಟ್ಟಿ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. *ಕಿಪ್ಚೋಗಿ ಅವರು ಆರಂಭದಿಂದಲೇ ಉತ್ತಮ ಕಾಯ್ದುಕೊಂಡಿದ್ದರು 10 ಕೀ,ಮೀ. ದೂರವನ್ನು ಕೇವಲ 28 ನಿಮಿಷ 38 ಸೆಕೆಂಡುಗಳಲ್ಲಿ ತಲುಪುವದರ ಮೂಲಕ ಅಗ್ರಸ್ಥಾನ ಪಡೆದುಕೊಂಡರು. * ಕಿಪ್ಚೋಗಿ ಮತ್ತು ಎಥಿಯೋಪಿಯಾದ ಅಂದಮ್ಲಾಕ್ ಬೆಹುಲಿ ಅವರು ಅರ್ಧ ಹಾದಿಯನ್ನು 59.51 ಸೆಕೆಂಡುಗಳಲ್ಲಿ ಕ್ರಮಿಸಿದರು ನಂತರ ಬೆಹುಲಿ ಅವರನ್ನು ಮೀರಿ 10 ಕಿ ಮೀ , ಅಂತರ ಕಾಯ್ದುಕೊಂಡ ಕಿಪ್ಚೋಗಿ ಅವರು ಅಗ್ರಸ್ಥಾನ ಪಡೆದುಕೊಂಡು ವಿಶ್ವದಾಖಲೆ ಮಾಡಿದರು.