Job Description: * ನಾಡಹಬ್ಬ ಮೈಸೂರು ದಸರಾಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 26 ಸೆಪ್ಟೆಂಬರ್ 2022 ರಂದು ಚಾಲನೆ ನೀಡಿದರು.* ಇತಿಹಾಸದಲ್ಲೇ ಮೊದಲ ಬಾರಿಗೆ ರಾಷ್ಟ್ರಪತಿಯಿಂದ ನಾಡಹಬ್ಬಕ್ಕೆ ಚಾಲನೆ ನೀಡಲಾಯಿತು.* 26 ಬೆಳಿಗ್ಗೆ ರಾಷ್ಟ್ರಪತಿ ಯವರು ನಾಡಹಬ್ಬ ದಸರಾ ವನ್ನು ಚಾಮುಂಡಿ ಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿದೇವಿ ಉತ್ಸವ ಮೂರ್ತಿಗೆ ಆರತಿ ಬೆಳಗುವದರ ಮೂಲಕ ನಾಡಹಬ್ಬವನ್ನು ಉದ್ಘಾಟಿಸಿದ್ದಾರೆ. ರಾಜ್ಯಪಾಲರಾದ ಥಾವರಚಂದ್ ಗೆಹಲೋತ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉಪಸ್ಥಿತರಿದ್ದರು. * ಮೈಸೂರು ರಾಜವಂಶಸ್ಥರಾಗಿರುವ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಖಾಸಗಿ ದರ್ಬಾರ್ ದಲ್ಲೇ ದಸರಾ ನಡೆಯಲಿದೆ.* ಅಂಬಾವಿಲಾಸ ಅರಮನೆಯಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಚಾಲನೆಗೊಳ್ಳಲಿವೆ. * ಲಲಿತ್ ಜೆ ರಾವ್ ಅವರಿಗೆ ರಾಜ್ಯ "ಸಂಗೀತ್ ವಿದ್ವಾನ್" ಎಂದು ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ ಹಾಗೂ ಚಲನಚಿತ್ರೋತ್ಸವಕ್ಕೆ ನಟ ಶಿವರಾಜಕುಮಾರ್ ಉದ್ಘಾಟಿಸಲಿದ್ದಾರೆ. * ಫಲಪುಷ್ಪ ಪ್ರದರ್ಶನ, ಆಹಾರ ಮೇಳ ಕುಸ್ತಿ ಪಂದ್ಯಾವಳಿ, ಅರಮನೆ ಆವರಣದಲ್ಲಿ ಸ್ವಾತಂತ್ಯ ಅಮೃತ ಮಹೋತ್ಸವ ಫಲಪುಷ್ಪ ಪ್ರದರ್ಶನ, ಯುವ ದಸರಾ, ದಸರಾ ದರ್ಶನ, ಪಾರಂಪರಿಕ ದಸರಾ, ಕವಿಗೋಷ್ಠಿ, ಉರ್ದು ಕವಿಗೋಷ್ಠಿ, ರೈತ ದಸರಾ ಹಲವಾರು ಕಾರ್ಯಕ್ರಮಗಳು ಪ್ರಾರಂಭವಾಗಲಿವೆ.