Job Description: * ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದ ಅಧ್ಯಕ್ಷರಾಗಿರುವ ಕ್ಸಾಬಾ ಕೂರೋಸಿ ಅವರನ್ನು ಭಾರತದ ವಿದೇಶಾಂಗ ಸಚಿವರಾದ ಎಸ್. ಜೈಶಂಕರ್ ಅವರು ಇತ್ತೀಚೆಗೆ ನ್ಯೂಯಾರ್ಕ್ ನಗರದಲ್ಲಿ ಭೇಟಿ ಮಾಡಿದರು. * ಈ ಭೇಟಿ ವೇಳೆ ಸುಸ್ಥಿರ ಅಭಿವೃದ್ಧಿ ಗುರಿ ಸಾಧನೆಗೆ ಕಾರ್ಯಸೂಚಿಯ ಕುರಿತ ಭಾರತದ ನಿಲುವನ್ನು ಪ್ರತಿಪಾದಿಸಿದರು. * ಜೊತೆಗೆ 77 ನೇ ಸಾಮಾನ್ಯ ಅಧಿವೇಶನದ ಆದ್ಯತೆ, ಉದ್ದೇಶ ಜಾರಿಗೆ ಭಾರತ ಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. * ಭಾರತ, ಫ್ರಾನ್ಸ್ ಮತ್ತು ಯುಎಇಯ ವಿದೇಶಾಂಗ ಸಚಿವರು ಇದೇ ಮೊದಲ ಬಾರಿಗೆ ಪರಸ್ಪರ ಅಭಿವೃದ್ಧಿಗೆ ಸಹಕರಿಸುವಂತೆ ತ್ರಿಪಕ್ಷೀಯ ಮಾತುಕತೆ ನಡೆಸಿದರು.