Job Description: * ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಚೆಂಡುಗಳ ಹೊಳಪಿಗಾಗಿ ಎಂಜಲು ಬಳಸುವ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಪ್ರಕಟಣೆ ಹೊರಡಿಸಿದೆ. * ಈ ಮೊದಲು ಕೋವಿಡ್ ಸಮಯದಲ್ಲಿ ಚೆಂಡುಗಳಿಗೆ ಎಂಜಲು ಸವರುವುದನ್ನು ತಾತ್ಕಲಿಕವಾಗಿ ನಿಷೇಧಿಸಲಾಗಿತ್ತು, ಇದರ ಜೊತೆಗೆ ಇನ್ನೂ ಕೆಲವು ಪ್ರಮುಖ ನಿಯಮಗಳನ್ನು ಪರಿಷ್ಕರಣೆ ಮಾಡಿ ಐಸಿಸಿ ನಿಯಮಗಳನ್ನು ಜಾರಿಗೊಳಿಸಿದೆ. * ಈ ನಿಯಮಗಳು ಅಕ್ಟೋಬರ್ 01, 2022 ರಿಂದ ಅನ್ವಯಿಸಲಿರುವುದಾಗಿ, ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ನೇತೃತ್ವದ ಕ್ರಿಕೆಟ್ ಸಮಿತಿಯು ಈ ನಿಯಮಗಳನ್ನು ಶಿಫಾರಸು ಮಾಡಿದೆ.