Job Description: * ಭಾರತೀಯ ವಾಯುಪಡೆಯ ಆಧುನೀಕರಣದ ಭಾಗವಾಗಿ ಹಂತ ಹಂತವಾಗಿ ಮಿಗ್-21 ವಿಮಾನಗಳನ್ನು ಸೇವೆಯಿಂದ ನಿವೃತ್ತಿಗೊಳಿಸಲಾಗುವದು. * ಇದರ ಭಾಗವಾಗಿ ಇದೀಗ ಶ್ರೀನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದ 51 ಸ್ಕ್ವಾಡ್ರನ್ "ಸ್ವೊರ್ಡ್ ಆರ್ಮ್ಸ್" ವಿಮಾನವು ಇದೆ ಸೆಪ್ಟೆಂಬರ್ 30 ರಂದು ನಿವೃತ್ತಿ ಹೊಂದಲಿದೆ. ಅದೇ ರೀತಿ ಉಳಿದ ಮೂರು 51 ಸ್ಕ್ವಾಡ್ರನ್ ವಿಮಾನಗಳು 2025ರ ವೇಳೆಗೆ ನಿವೃತ್ತಿಗೊಳಿಸುವ ಯೋಜನೆ ಹೊಂದಲಾಗಿದೆ. * ಈ ವಿಮಾನಗಳು 1999 ಕಾರ್ಗಿಲ್ ಯುದ್ಧದ "ಆಪರೇಶನ್ ಸಫೇದ್ ಸಾಗರ್" ನಲ್ಲಿ ಕಾರ್ಯ ನಿರ್ವಹಿಸಿದ್ದವು. * ಈ ಯುದ್ಧ ವಿಮಾನಗಳು 1960ರ ದಶಕದಲ್ಲಿ ಭಾರತೀಯ ವಾಯುಪಡೆಗೆ ಸೇರ್ಪಡೆಗೊಂಡಿದ್ದವು. * ಇತ್ತೀಚೆಗಷ್ಟೇ ವಿಂಗ್ ಕಮಾಂಡರ್ ಅಭಿನಂದನ್ ಅವರು ಈ ಮಿಗ್ ವಿಮಾನ ಬಳಸಿಯೇ ಪಾಕ್ ನ ಅತ್ಯಾಧುನಿಕ ಎಫ್-16 ವಿಮಾನವನ್ನು ಹಿಮ್ಮೆಟ್ಟಿಸಿದ್ದರು.